ಮತ್ತೆ ಕ್ಷಿಪಣಿ ಪರೀಕ್ಷೆ ನಡೆಸಿದ ಉತ್ತರ ಕೊರಿಯಾ‌

Update: 2022-01-17 18:35 GMT
Photo : PTI

ಪ್ಯಾಂಗ್ಯಾಂಗ್, ಜ.17: ಸೋಮವಾರ ಉತ್ತರಕೊರಿಯಾ 2 ಖಂಡಾಂತರ ಕ್ಷಿಪಣಿಗಳನ್ನು ಪರೀಕ್ಷಿಸಿದ್ದು ಇದು ಜನವರಿಯಲ್ಲಿ ನಡೆಸಿದ 4ನೇ ಖಂಡಾಂತರ ಕ್ಷಿಪಣಿ ಪರೀಕ್ಷೆಯಾಗಿದೆ ಎಂದು ದಕ್ಷಿಣ ಕೊರಿಯಾ ಸೇನೆ ಹೇಳಿದೆ.

ಪ್ಯಾಂಗ್ಯಾಂಗ್ ಅಂತರಾಷ್ಟೀಯ ವಿಮಾನ ನಿಲ್ದಾಣದ ಬಳಿಯಿರುವ ಸುನಾನ್ ಪ್ರದೇಶದಲ್ಲಿ 2 ಕಡಿಮೆ ದೂರ ವ್ಯಾಪ್ತಿಯ ಖಂಡಾಂತರ ಕ್ಷಿಪಣಿಯನ್ನು ಪರೀಕ್ಷಿಸಲಾಗಿದ್ದು 4 ನಿಮಿಷಗಳ ಅಂತರದಲ್ಲಿ ಈ ಪರೀಕ್ಷೆ ನಡೆದಿದೆ. ಈ ಕ್ಷಿಪಣಿ ಗರಿಷ್ಟ 42 ಕಿಮೀ ಎತ್ತರದಲ್ಲಿ 380 ಕಿಮೀ ದೂರದ ಗುರಿಗೆ ಅಪ್ಪಳಿಸಿದೆ ಎಂದು ದಕ್ಷಿಣ ಕೊರಿಯಾ ಸೇನಾಧಿಕಾರಿಗಳು ಹೇಳಿದ್ದಾರೆ.
ಈ ಕ್ಷಿಪಣಿಗಳಿಂದ ಅಮೆರಿಕದ ಸಿಬಂದಿಗಳು ಅಥವಾ ಪ್ರದೇಶ ಅಥವಾ ಅದರ ಮಿತ್ರರಿಗೆ ತಕ್ಷಣದ ಅಪಾಯ ಎದುರಾಗಿಲ್ಲ. ಆದರೆ ಉತ್ತರಕೊರಿಯಾದ ‘ಅಕ್ರಮ’ ಶಸ್ತ್ರಾಸ್ತ್ರ ಕಾರ್ಯಕ್ರಮಗಳನ್ನು ಅಸ್ಥಿರಗೊಳಿಸುವ ಅಗತ್ಯವನ್ನು ಎತ್ತಿಹಿಡಿದಿದೆ ಎಂದು ಅಮೆರಿಕದ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಕ್ಷಿಪಣಿಗಳು ಜಪಾನ್ನ ಆರ್ಥಿಕ ವಲಯದ ಹೊರಭಾಗಕ್ಕೆ ಅಪ್ಪಳಿಸಿದ್ದು , ಉತ್ತರಕೊರಿಯಾದ ಈ ಕ್ರಮಗಳು ಪ್ರಾದೇಶಿಕ ಶಾಂತಿಗೆ ಬೆದರಿಕೆಯಾಗಿದೆ ಎಂದು ಜಪಾನ್ನ ರಕ್ಷಣಾ ಸಚಿವ ನೊಬುವೊ ಕಿಶಿ ಪ್ರತಿಕ್ರಿಯಿಸಿದ್ದಾರೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News