ಅಸ್ಸಾಂ: 10 ಕೋ.ರೂ. ಮೌಲ್ಯದ ಹೆರಾಯಿನ್ ವಶ

Update: 2022-01-17 18:36 GMT
photo: Twitter/@himantabiswa)

ಗುವಾಹತಿ, ಜ. 17: ಪೊಲೀಸರು ಸೋಮವಾರ ಅಸ್ಸಾಂನ ಕರ್ಬಿ ಅಂಗ್ಲೋಂಗ್ ಜಿಲ್ಲೆಯಿಂದ 10 ಕೋಟಿ ರೂಪಾಯಿ ಮೌಲ್ಯದ 1.6 ಕಿ.ಗ್ರಾಂ. ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದಾರೆ ಹಾಗೂ ಇಬ್ಬರನ್ನು ಬಂಧಿಸಿದ್ದಾರೆ.

ರಹಸ್ಯ ಮಾಹಿತಿಯ ಹಿನ್ನೆಲೆಯಲ್ಲಿ ಕರ್ಬಿ ಅಂಗ್ಲೋಂಗ್ ಜಿಲ್ಲೆಯ ಪೊಲೀಸರು ಸಿಆರ್ಪಿಎಫ್ ಸಿಬ್ಬಂದಿಯೊಂದಿಗೆ ಸೇರಿ ಬೊಕಾಜನ್ ಸಮೀಪದ ಎಸ್ಬಿಐ ಖಾತ್ಕಟಿ ಮುಂದೆ ತಪಾಸಣಾ ಠಾಣೆ ರೂಪಿಸಿದರು ಹಾಗೂ ಸೋಮವಾರ ಮುಂಜಾನೆ ಟ್ರಕ್ ಒಂದನ್ನು ತಡೆ ಹಿಡಿದರು.

ಪೊಲೀಸರ ತಂಡ ಟ್ರಕ್ ಅನ್ನು ಕೂಲಂಕಷ ಪರಿಶೀಲನೆ ನಡೆಸಿದಾಗ ಒಟ್ಟು 1.6 ಕಿ.ಗ್ರಾಂ ಹೆರಾಯಿನ್ 115 ಸಾಬೂನು ಪೆಟ್ಟಿಗೆಯಲ್ಲಿ ಪತ್ತೆಯಾಯಿತು.
ಟ್ರಕ್ ಮಣಿಪುರದಿಂದ ಆಗಮಿಸುತ್ತಿತ್ತು ಎಂದು ಬೊಕಜಾನ್ ಎಸ್ಡಿಪಿಒ ಜಾನ್ ದಾಸ್ ತಿಳಿಸಿದ್ದಾರೆ.

‘‘ಟ್ರಕ್ನ ಕ್ಯಾಬಿನ್ನಲ್ಲಿ ಅಡಗಿಸಿ ಇರಿಸಲಾಗಿದ್ದ 1.6 ಕಿ.ಗ್ರಾಂ. ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಈ ಹೆರಾಯಿನ್ನ ಒಟ್ಟು ಅಂದಾಜು ವೌಲ್ಯ ಸುಮಾರು 10 ಕೋಟಿ ರೂಪಾಯಿ. ನಾವು ಇಬ್ಬರನ್ನು ಬಂಧಿಸಿದ್ದೇವೆ’’ ಎಂದು ಜಾನ್ ದಾಸ್ ಹೇಳಿದ್ದಾರೆ.

ಬಂಧಿತ ಆರೋಪಿಗಳನ್ನು ಅಮೀರ್ ಹುಸೈನ್ (22) ಹಾಗೂ ಸಲಾವು ರೆಹ್ಮಾನ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಮಣಿಪುರದವರು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News