ಅಫ್ಘಾನ್ : ಭೂಕಂಪಕ್ಕೆ ಕನಿಷ್ಠ 22 ಬಲಿ

Update: 2022-01-18 18:34 GMT

 ಕಾಬೂಲ್,ಜ.18: ತುರ್ಕ್‌ಮೆನಿಸ್ತಾನ  ಗಡಿಗೆ ತಾಗಿಕೊಂಡಿರುವ ಅಫ್ಘಾನಿಸ್ತಾನದ ಪಶ್ಚಿಮ ಬಾದ್ಗಿಸ್ ಪ್ರಾಂತದಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಅವಳಿ ಭೂಕಂಪಗಳಲ್ಲಿ ಕನಿಷ್ಠ 22 ಮಂದಿ ಮೃತಪಟ್ಟಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.

 ಭೂಕಂಪ ಪೀಡಿತವಾದ ದುರ್ಗಮ ಹಳ್ಳಿಗಳಿಗೆ ರಕ್ಷಣಾ ಕಾರ್ಯಕರ್ತರು ಇನ್ನಷ್ಟೇ ತಲುಪಬೇಕಾಗಿದ್ದು ಸಾವಿನ ಸಂಖ್ಯೆ ಇನ್ನೂ ಏರುವ ಸಾಧ್ಯತೆಯಿದೆಯೆಂದು ಮೂಲಗಳು ತಿಳಿಸಿವೆ.

  ಭೂಕಂಪದಿಂದಾಗಿ ನೂರಾರು ಮನೆಗಳು ನಾಶಗೊಂಡಿವೆಯೆಂದು ಬಾದ್ಗಿಸ್ ಪ್ರಾಂತದ ಸಂಸ್ಕೃತಿ ಹಾಗೂ ಮಾಹಿತಿ ಇಲಾಖೆಯ ವರಿಷ್ಠ ಮೊಹಮ್ಮದ್ ಸರ್ವಾರಿ ತಿಳಿಸಿದ್ದಾರೆ. ಸೋಮವಾರ ಸ್ಥಳೀಯ ಕಾಲಮಾನ ಮಧ್ಯಾಹ್ನ 2:00 ಗಂಟೆಯವೇಳೆಗೆ ಮೊದಲ ಭೂಕಂಪ ಸಂಭವಿಸಿದ್ದು, ಅದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.3 ದಾಖಲಾಗಿತ್ತು.  ಸಂಜೆ 4.00 ಗಂಟೆಗೆ ಎರಡನೆ ಬಾರಿಗೆ ಭೂಮಿ ಕಂಪಿಸಿದ್ದು, ತೀವ್ರತೆಯು ರಿಕ್ಟರ್ ಮಾಪಕದಲ್ಲಿ 4.9ರಷ್ಟಿತ್ತು. ಭೂಕಂಪದ ಕೇಂದ್ರಬಿಂದು ಬಾದ್ಗಿಸ್ ಪ್ರಾಂತದ ರಾಜಧಾನಿ ಖ್ವಲಾಎನೌನಿಂದ 50 ಕಿ.ಮೀ. ದೂರದಲ್ಲಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News