ಆಕಾಶದಲ್ಲಿ ಜಾಹೀರಾತು: ಬೆಂಗಳೂರಿಗೂ ಬಂತು 'ಸ್ಕೈ ಅಡ್ವರ್‍ಟೈಸಿಂಗ್'

Update: 2022-01-19 14:06 GMT

ಬೆಂಗಳೂರು, ಜ. 19: ವಿದೇಶಗಳಲ್ಲಿ ವಿಮಾನಗಳ ಮೂಲಕ ತಮ್ಮ ಪ್ರೀತಿ ಪಾತ್ರರಿಗೆ ಹಾರೈಕೆಗಳನ್ನು ತಿಳಿಸುವುದು ಹಾಗೂ ವಾಣಿಜ್ಯ-ವ್ಯವಹಾರ ಸಂಬಂಧಿ ಜಾಹೀರಾತುಗಳನ್ನು ನೋಡಿರುತ್ತೀರಿ. ಇದೀಗ ಇಂತಹದ್ದೇ ಸ್ಕೈ ಜಾಹೀರಾತುಗಳ ಅವಕಾಶ ಬೆಂಗಳೂರಿನ ಜನತೆಗೆ ಬಂದೊದಗಿದೆ.

ವಿಮಾನದ ಮೂಲಕ ಜಾಹೀರಾತುಗಳನ್ನು ಆಕಾಶಕ್ಕೆ ಕೊಂಡೊಯ್ಯುವ ಅವಕಾಶವನ್ನು ಹೊತ್ತು ತಂದಿದೆ ಆಕಾರ್ ಅಡ್ವರ್‍ಟೈಸಿಂಗ್ ಮತ್ತು ಏರಿಯಲ್ ವಕ್ರ್ಸ್ ಏರೋ ಎಲ್‍ಎಲ್‍ಪಿ. ಆಕಾಶದಲ್ಲಿ ಸುತ್ತುತ್ತಾ ಸಂದೇಶಗಳನ್ನು ಪ್ರೀತಿಪಾತ್ರರಿಗೆ ತಲುಪಿಸುವ ಸೇವೆ ಇದಾಗಿದೆ. ಅಲ್ಲದೇ, ಸಂಸ್ಥೆಯ ಬಗ್ಗೆ, ಜನರಿಗೆ ಸಂದೇಶಗಳನ್ನು ಒದಗಿಸುವಂತಹ, ರಾಜಕೀಯ ವಿಷಯಗಳನ್ನು ಬಿತ್ತರಿಸುವಂತಹ ಜಾಹೀರಾತುಗಳನ್ನು ಈ ಸೇವೆಯ ಮೂಲಕ ಬಿತ್ತರಿಸಬಹುದಾಗಿದೆ.

ಲೆಟರ್ ಬ್ಯಾನರ್ಸ್, ಏರಿಯಲ್ ಬಿಲ್‍ಬೋರ್ಡ್, ಏರಿಯಲ್ ಲೋಗೋ ಬೋರ್ಡ್, ಹುಟ್ಟುಹಬ್ಬ, ಶುಭಾಶಯಗಳನ್ನು ತಿಳಿಸುವಂತಹ ವೈಯಕ್ತಿಕ ಬ್ಯಾನರ್‍ಗಳು ಮತ್ತು ರಾಜಕೀಯ ಅಥವಾ ಸಾರ್ವಜನಿಕ ಸೇವೆಗಳನ್ನು ತಿಳಿಸುವಂತಹ ಜಾಹೀರಾತುಗಳನ್ನು ಈ ಸಂಸ್ಥೆ ನೀಡುತ್ತಿದೆ ಎಂದು ಆಕಾರ್ ಅಡ್ವರ್ಟೈಸಿಂಗ್‍ನ ಸಿಇಓ ಶರಣ್ ಮಖಿಜಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News