ನಾರಾಯಣಗುರು ಸ್ತಬ್ಧಚಿತ್ರ ತಿರಸ್ಕಾರ: ದಲಿತ ಸಂಘಟನೆ ಖಂಡನೆ

Update: 2022-01-21 15:02 GMT

ಉಡುಪಿ, ಜ.21: ಹೊಸದಿಲ್ಲಿಯಲ್ಲಿ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ದಚಿತ್ರಕ್ಕೆ ಅವಕಾಶ ನೀಡದ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ಅವಮಾನ ಮಾಡಿರುವುದನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮತ್ತು ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲಾ ಶಾಖೆ ಜಂಟಿ ಹೇಳಿಕೆಯಲ್ಲಿ ಖಂಡಿಸಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ದಸಂಸ ರಾಜ್ಯ ಸಮಿತಿ ಸದಸ್ಯ ಹಾಗೂ ದಲಿತ ಚಿಂತಕ ಜಯನ್ ಮಲ್ಪೆ, ಸಂತ, ಮಹಾ ಮಾನವತಾವಾದಿ, ಸಮಾಜ ಸುಧಾರಕ, ಹಿಂದುಳಿದ ವರ್ಗಗಳ ಮತ್ತು ತುಳಿತಕ್ಕೆ ಒಳಗಾದ ಸಮುದಾಯಗಳನ್ನು ಮೇಲಕ್ಕೆತ್ತಿ ದವರು. ಭಾರತೀಯ ದಾರ್ಶನಿಕರಾದ ಅಂಬೇಡ್ಕರ್, ಸ್ವಾಮಿ ವಿವೇಕಾನಂದ ಮುಂತಾದವರು ನಾರಾಯಣಗುರುಗಳ ಪ್ರಭಾವಕ್ಕೆ ಒಳಗಾ ಗಿದ್ದರು ಎಂದಿದ್ದಾರೆ.

ಇಂತಹ ಮಹಾನ್ ಸಂತ ನಾರಾಯಣ ಗುರುಗಳ ಸ್ತಬ್ದಚಿತ್ರವನ್ನು ಕೇರಳ ಸರಕಾರ ದೆಹಲಿ ಪೆರೇಡಿಗೆ ಕಳುಹಿಸಿದರೆ ಕೇಂದ್ರದ ಆಯ್ಕೆ ಸಮಿತಿಯಲ್ಲಿರುವ ಜಾತಿವಾದಿ ಮನಸ್ಸುಗಳು ತಿರಸ್ಕರಿಸಿರುವುದು ಶೋಷಿತ ಸಮಾಜಕ್ಕೆ ಮಾಡಿದ ಅಪಮಾನ ಎಂದು ಜಯನ್ ಮಲ್ಪೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News