ಐಪಿಎಲ್ ನಲ್ಲಿ ಹೆಚ್ಚು ಸಂಭಾವನೆ ಪಡೆಯಲಿರುವ ಆಟಗಾರ ಎನಿಸಿಕೊಂಡ ಕೆ.ಎಲ್.ರಾಹುಲ್

Update: 2022-01-22 07:18 GMT

ಹೊಸದಿಲ್ಲಿ: ಎರಡು ಹೊಸ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿಗಳಾದ ಲಕ್ನೋ ಮತ್ತು ಅಹಮದಾಬಾದ್ - ಮುಂದಿನ ತಿಂಗಳು ನಡೆಯಲಿರುವ ಐಪಿಎಲ್ ಮೆಗಾ ಹರಾಜಿಗೆ ಮುಂಚಿತವಾಗಿ ತಾವು ಆಯ್ಕೆ ಮಾಡಿರುವ ಮೂವರು ಆಟಗಾರರನ್ನು ಹೆಸರಿಸಿವೆ.

ಅಹಮದಾಬಾದ್ ತಂಡವು ಹಾರ್ದಿಕ್ ಪಾಂಡ್ಯ, ರಶೀದ್ ಖಾನ್ ಮತ್ತು ಶುಭಮನ್ ಗಿಲ್ ಅವರನ್ನು ಆಯ್ಕೆ ಮಾಡಿದರೆ, ಲಕ್ನೋ ತಂಡ  ಕೆ.ಎಲ್. ರಾಹುಲ್, ಮಾರ್ಕಸ್ ಸ್ಟೊನಿಸ್ ಮತ್ತು ರವಿ ಬಿಷ್ಣೋಯ್ ಅವರನ್ನು ಆಯ್ಕೆ ಮಾಡಿತು.

ಮುಂಬರುವ ಐಪಿಎಲ್ ಸೀಸನ್‌ನಲ್ಲಿ ಲಕ್ನೋ ಮೂಲದ ಫ್ರಾಂಚೈಸಿಯನ್ನು ಮುನ್ನಡೆಸಲಿರುವ ರಾಹುಲ್ ಅವರನ್ನು  ರೂ. 17 ಕೋಟಿ ನೀಡಿ ಫ್ರಾಂಚೈಸಿ  ತನ್ನದಾಗಿಸಿಕೊಂಡಿದೆ. ಐಪಿಎಲ್ ಇತಿಹಾಸದಲ್ಲಿ ರಾಹುಲ್ ಹೆಚ್ಚು ಸಂಭಾವನೆ ಪಡೆಯಲಿರುವ  ಆಟಗಾರ ಎನಿಸಿಕೊಂಡು ವಿರಾಟ್ ಕೊಹ್ಲಿ ಅವರನ್ನು ಸರಿಗಟ್ಟಿದರು.

2018 ರಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಯವರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹರಾಜಿನ ಮೊದಲು ರೂ 17 ಕೋಟಿಗೆ ಒಪ್ಪಂದ ಮಾಡಿಕೊಂಡಿತ್ತು.

ರಾಹುಲ್ ಹೊರತಾಗಿ  ಲಕ್ನೋ ಆಸ್ಟ್ರೇಲಿಯಾದ ಆಲ್ ರೌಂಡರ್ ಸ್ಟೊನಿಸ್ ಮತ್ತು ಭಾರತದ ಹೊಸ ಸ್ಪಿನ್ನರ್ ಬಿಷ್ಣೋಯ್ ಅವರೊಂದಿಗೆ  ಕ್ರಮವಾಗಿ ರೂ. 9.2 ಕೋಟಿ ಮತ್ತು ರೂ. 4 ಕೋಟಿಗೆ ಒಪ್ಪಂದ ಮಾಡಿಕೊಂಡಿದೆ.

ಮತ್ತೊಂದೆಡೆ, ಅಹಮದಾಬಾದ್ ತನ್ನ ನಾಯಕನಾಗಿ ಹಾರ್ದಿಕ್ ಪಾಂಡ್ಯ ಅವರನ್ನು 15 ಕೋಟಿ ರೂ.ಗೆ ಸಹಿ ಹಾಕಿದರೆ, ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಕೂಡ ಅದೇ ಬೆಲೆಗೆ ಆಯ್ಕೆಯಾಗಿದ್ದಾರೆ.

ಮತ್ತೊಂದೆಡೆ, ಈ ವರ್ಷದ ಹರಾಜಿಗೆ ಮುಂಚಿತವಾಗಿ ಶುಭಮನ್ ಗಿಲ್ 8 ಕೋಟಿ ರೂ.ಗೆ ಡ್ರಾಫ್ಟ್ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News