ಭಾರತದ ನಾಯಕತ್ವ ತೊರೆಯಲು ವಿರಾಟ್ ಕೊಹ್ಲಿಗೆ "ಬಲವಂತ" ಪಡಿಸಲಾಗಿದೆ: ಶುಐಬ್ ಅಖ್ತರ್

Update: 2022-01-23 08:28 GMT

ಹೊಸದಿಲ್ಲಿ: ವಿರಾಟ್ ಕೊಹ್ಲಿಗೆ ಭಾರತದ ಕ್ರಿಕೆಟ್  ನಾಯಕತ್ವವನ್ನು ತೊರೆಯುವಂತೆ ಒತ್ತಾಯಿಸಲಾಯಿತು ಎಂದು ಪಾಕ್  ಮಾಜಿ ವೇಗದ ಬೌಲರ್ ಶುಐಬ್ ಅಖ್ತರ್ ಹೇಳಿದ್ದಾರೆ.

ಕಳೆದ ವರ್ಷ ಕೊಹ್ಲಿ ಟ್ವೆಂಟಿ-20 ನಾಯಕತ್ವದಿಂದ ಕೆಳಗಿಳಿದಿದ್ದರು. ನಂತರ ಅವರು  ಟೆಸ್ಟ್ ನಾಯಕತ್ವವನ್ನು ತೊರೆಯುವ ಮೊದಲು ಅವರನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕಲಾಗಿತ್ತು.

7 ವರ್ಷಗಳ ಕಾಲ ತಂಡವನ್ನು  ನಾಯಕನಾಗಿ ಮುನ್ನಡೆಸಿದ ಬಳಿಕ ಕಳೆದ ವಾರ ಭಾರತದ ಟೆಸ್ಟ್ ನಾಯಕತ್ವವನ್ನು ತ್ಯಜಿಸಿದ್ದರು.

ಪ್ರಸ್ತುತ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಭಾಗವಹಿಸುತ್ತಿರುವ ಅಖ್ತರ್, ಎಎನ್‌ಐ ಜೊತೆ ಮಾತನಾಡುತ್ತಾ "ವಿರಾಟ್ ನಾಯಕತ್ವವನ್ನು ತೊರೆದಿಲ್ಲ. ಆದರೆ ಹಾಗೆ ಮಾಡಲು ಅವರನ್ನು ಒತ್ತಾಯಿಸಲಾಯಿತು. ಇದು ಅವರಿಗೆ ಉತ್ತಮ ಸಮಯವಲ್ಲ. ಆದರೆ ಅವರು ಏನೆಂದು ಸಾಬೀತುಪಡಿಸಬೇಕಾಗಿದೆ. ಅವರು ಒಬ್ಬ ಮಹಾನ್ ವ್ಯಕ್ತಿ ,ಓರ್ವ ಶ್ರೇಷ್ಠ ಬ್ಯಾಟ್ಸ್‌ಮನ್ ಮತ್ತು ವಿಶ್ವದ ಎಲ್ಲರಿಗಿಂತ ಹೆಚ್ಚಿನದನ್ನು ಸಾಧಿಸಿದ್ದಾರೆ. ಅವರು ಇದೀಗ  ನೈಜ ಆಟ ಆಡಬೇಕಾಗಿದೆ"ಎಂದರು.

ಭಾರತದ ಮುಂದಿನ ಟೆಸ್ಟ್ ನಾಯಕನ ಕುರಿತು ಮಾತನಾಡಿದ ವೇಗಿ, "ಬಿಸಿಸಿಐ ಈ ಬಗ್ಗೆ ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ನನಗೆ ತಿಳಿದಿದೆ" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News