×
Ad

ಮಂಗಳೂರು: ‘ಸಿಟಿ ಗೋಲ್ಡ್ ಶಾಪಿಂಗ್ ಫೆಸ್ಟಿವಲ್’ನ ನಾಲ್ಕನೇ ಲಕ್ಕಿ ಡ್ರಾ

Update: 2022-01-24 22:32 IST

ಮಂಗಳೂರು, ಜ.24: ನಗರದ ಕಂಕನಾಡಿಯ ಬೈಪಾಸ್ ರಸ್ತೆಯಲ್ಲಿರುವ ‘ಸಿಟಿ ಗೋಲ್ಡ್‌‘ನಲ್ಲಿ ಆಯೋಜಿಸಲಾದ ‘ಶಾಪಿಂಗ್ ಫೆಸ್ಟಿವಲ್’ನ ನಾಲ್ಕನೇ ವಾರದ ಲಕ್ಕಿ ಡ್ರಾ ಸೋಮವಾರ ನಡೆಯಿತು.

ಹಿಸ್ರಾರ್ ಈವೆಂಟ್ಸ್ ಆ್ಯಂಡ್ ಸೆಲೆಬ್ರೇಶನ್ಸ್‌ನ ಸ್ಥಾಪಕ ಹಿಸ್ರಾರ್ ತಲ್ಲಣಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮೂರನೇ ವಾರದ ಲಕ್ಕಿಡ್ರಾ ವಿಜೇತರಾದ ನಾಗುರಿಯ ಅಜಿತ್ ಜೋಸೆಫ್ ಅವರಿಗೆ ವಜ್ರದ ಉಂಗುರ ವಿತರಿಸಿದರು.

ಮತ್ತೋರ್ವ ಮುಖ್ಯ ಅತಿಥಿ ಕಲರ್ಸ್ ಕನ್ನಡ 2021ರ ಱಎದೆ ತುಂಬಿ ಹಾಡುವೆನುಱ ರಿಯಾಲಿಟಿ ಶೋದ ವಿಜೇತ ಸಂದೇಶ್ ನೀರುಮಾರ್ಗ ನಾಲ್ಕನೇ ವಾರದ ಅದೃಷ್ಟದ ಚೀಟಿ ಎತ್ತಿದರು. ಈ ಬಹುಮಾನವು ಪಂಪ್‌ವೆಲ್ ನಾದರ್ನ್ ಸ್ಕೈ ಅಪಾರ್ಟ್‌ ಮೆಂಟ್‌ನ ರಮ್ಲತ್ ಅವರ ಪಾಲಾಯಿತು.

ಈ ಸಂದರ್ಭ ಸಿಟಿ ಗೋಲ್ಡ್‌ನ ಬ್ರಾಂಚ್ ಮ್ಯಾನೇಜರ್ ಅಹ್ಮದ್ ಹಫೀಝ್, ಮಾರ್ಕೆಟಿಂಗ್ ಮ್ಯಾನೇಜರ್ ಇಮ್ರಾನ್ ವಿ., ಮತ್ತಿತರರು ಉಪಸ್ಥಿತರಿದ್ದರು.

ಮಂಗಳೂರು, ಪುತ್ತೂರು, ಕಾಸರಗೋಡಿನಲ್ಲಿರುವ ಸಿಟಿ ಗೋಲ್ಡ್‌ನಲ್ಲಿ ಶಾಪಿಂಗ್ ಫೆಸ್ಟಿವಲ್‌ಗೆ ನವೆಂಬರ್ 19ರಂದು ಚಾಲನೆ ನೀಡಲಾಗಿತ್ತು. 2022ರ ಮಾರ್ಚ್‌ವರೆಗೆ ನಡೆಯುವ ಈ ಫೆಸ್ಟಿವಲ್ ಸಂದರ್ಭ ವಿಶೇಷ ಕೊಡುಗೆಯನ್ನೂ ಘೋಷಿಸಲಾಗಿದೆ. ಈ ಮಹಾಮೇಳದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿದ ಚಿನ್ನಾಭರಣಗಳ ಸಂಗ್ರಹವಲ್ಲದೆ ದೇಶ ವಿದೇಶದ ಆಧುನಿಕ ಹಾಗೂ ಸಾಂಪ್ರದಾಯಿಕ ಚಿನ್ನಾಭರಣ ವಿನ್ಯಾಸ ಲಭ್ಯವಿದೆ. ಅಭೂತಪೂರ್ವ ನೆಕ್ಲೆಸ್, ಬಳೆಗಳು, ಕಿವಿಯೋಲೆ ಮತ್ತು ಉಂಗುರಗಳನ್ನು ಒಳಗೊಂಡಿದೆ. ಫೆಸ್ಟಿವಲ್ ಸಂದರ್ಭ ತಯಾರಿಕಾ ವೆಚ್ಚದಲ್ಲಿ ವಿಶೇಷ ಕೊಡುಗೆಯೊಂದಿಗೆ ಪ್ರತಿ ದಿನ ಅನೇಕ ಬಹುಮಾನ ಗೆಲ್ಲುವ ಅವಕಾಶವನ್ನೂ ಕಲ್ಪಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News