ಕಾಂಗ್ರೆಸ್ ಗೆ ಗುಲಾಂ ನಬಿ ಆಝಾದ್ ಸೇವೆಯ ಅಗತ್ಯವಿಲ್ಲದಿರುವುದು ವಿಪರ್ಯಾಸ: ಕಪಿಲ್ ಸಿಬಲ್

Update: 2022-01-26 05:41 GMT

ಹೊಸದಿಲ್ಲಿ: ಗುಲಾಂ ನಬಿ ಆಝಾದ್ ಅವರ ಕೊಡುಗೆಗಳನ್ನು ರಾಷ್ಟ್ರ ಗುರುತಿಸುತ್ತಿರುವಾಗ ಕಾಂಗ್ರೆಸ್‌ಗೆ ಅವರ ಸೇವೆಯ ಅಗತ್ಯವಿಲ್ಲ ಎಂಬುದು ವಿಪರ್ಯಾಸ ಎಂದು ಪಕ್ಷದಲ್ಲಿ ಸಾಂಸ್ಥಿಕ ಸುಧಾರಣೆಗಳನ್ನು ಬಯಸುತ್ತಿರುವ ಹಿರಿಯ ನಾಯಕ ಹಾಗೂ  23 ರ ಗುಂಪಿನ ಸದಸ್ಯ ಕಪಿಲ್ ಸಿಬಲ್ ಹೇಳಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಅವರನ್ನು ಈ ವರ್ಷದ ಪದ್ಮ ಪ್ರಶಸ್ತಿಗೆ ಆಯ್ಕೆ ಮಾಡಿದ ನಂತರ ಕಪಿಲ್ ಈ ಹೇಳಿಕೆ ನೀಡಿದ್ದಾರೆ.

 "ಗುಲಾಂ ನಬಿ ಆಝಾದ್ ಅವರಿಗೆ ಪದ್ಮ ಭೂಷಣ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಅವರಿಗೆ ಅಭಿನಂದನೆಗಳು. ಸಾರ್ವಜನಿಕ ಜೀವನಕ್ಕೆ ಅವರ ಕೊಡುಗೆಗಳನ್ನು ರಾಷ್ಟ್ರವು ಗುರುತಿಸಿದಾಗ ಕಾಂಗ್ರೆಸ್‌ಗೆ ಅವರ ಸೇವೆಯ ಅಗತ್ಯವಿಲ್ಲದಿರುವುದು ವಿಪರ್ಯಾಸ" ಎಂದು ಕಪಿಲ್ ಹೇಳಿದ್ದಾರೆ.

ಆದಾಗ್ಯೂ, ಮಂಗಳವಾರ ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ರಹಸ್ಯ ಶೀರ್ಷಿಕೆಯನ್ನು ಪೋಸ್ಟ್ ಮಾಡಿದ್ದಾರೆ. ಇದು ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಪಕ್ಷದ ಸಹೋದ್ಯೋಗಿ ಗುಲಾಂ ನಬಿ ಆಝಾದ್ ಅವರ ಹೆಸರು ಇರುವುದಕ್ಕೆ ಸೂಕ್ಷ್ಮವಾಗಿ ಗೇಲಿ ಮಾಡುವಂತಿದೆ.

ಬಂಗಾಳದ ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಯ ಪದ್ಮಭೂಷಣ ಪ್ರಶಸ್ತಿಯನ್ನು ತಿರಸ್ಕರಿಸಿದ ಸುದ್ದಿಯನ್ನು ಟ್ವೀಟ್ ಮಾಡಿದ್ದ ರಮೇಶ್, "ಅವರು ಸರಿಯಾದ ಕೆಲಸ  ಮಾಡಿದ್ದಾರೆ. ಅವರು ಗುಲಾಮ್ ಅಲ್ಲ ಆಝಾದ್  ಆಗಲು ಬಯಸುತ್ತಾರೆ" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News