ತಲಪಾಡಿ: ಫಲಾಹ್ ವಿದ್ಯಾಸಂಸ್ಥೆಯಲ್ಲಿ ಗಣರಾಜ್ಯೋತ್ಸವ

Update: 2022-01-26 16:43 GMT

ಮಂಗಳೂರು, ಜ.26: ತಲಪಾಡಿಯ ಫಲಾಹ್ ವಿದ್ಯಾಸಂಸ್ಥೆಯಲ್ಲಿ 73ನೇ ಗಣರಾಜ್ಯೋತ್ಸವದ ಧ್ವಜಾರೋಹಣ ವನ್ನು ಸಂಸ್ಥೆಯ ಅಧ್ಯಕ್ಷ ಹಾಜಿ ಯು.ಬಿ ಮುಹಮ್ಮದ್ ನೆರವೇರಿಸಿದರು.

ಸಂಸ್ಥೆಯ ಸದಸ್ಯ ಇಸ್ಮಾಯಿಲ್ ತಲಪಾಡಿ ಗಣರಾಜ್ಯೋತ್ಸವದ ಮಹತ್ವದ ಬಗ್ಗೆ ಮಾತನಾಡಿದರು. ಈ ಸಂದರ್ಭ ಕಾರ್ಯದರ್ಶಿ ಅರಬಿ ಕುಂಞ, ಕೋಶಾಧಿಕಾರಿ ಮಜಲ್ ಅಬ್ಬಾಸ್, ಜೊತೆ ಕಾರ್ಯದರ್ಶಿ ಬಶೀರ್ ತಲಪಾಡಿ, ಸದಸ್ಯರಾದ ಜಿ. ಅಬ್ಬಾಸ್, ಪ್ರಾಂಶುಪಾಲ ಅಬ್ದುಲ್ ಖಾದರ್ ಹುಸೈನ್, ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮುಹಮ್ಮದ್ ರಫೀಕ್, ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಆಯಿಶಾ ಸಬೀನಾ ಕೈಸಿರಾನ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ವಿದ್ಯಾ ವಿ. ಡಿಸೋಜ , ಮದ್ರಸದ ಸದರ್ ಮುಅಲ್ಲಿಂ ಮುಸ್ತಫಾ ಕಮಾಲ್ ಉಪಸ್ಥಿತರಿದ್ದರು.

ಶಿಕ್ಷಕಿ ಐರಿನ್ ರೋಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಸಾಂಡ್ರಾ ಡಿಸೋಜ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News