ಆರ್ಯಭಟ ಪ್ರಶಸ್ತಿ ಪುರಸ್ಕೃತ ಗಾಯಕಿ ಶೀಲಾ ದಿವಾಕರ್ ನಿಧನ

Update: 2022-01-26 17:07 GMT

ಮಂಗಳೂರು, ಜ 26: ನಗರದ ಮಾರ್ನಮಿಕಟ್ಟೆ ನಿವಾಸಿ ಕರಾವಳಿ ಕೋಗಿಲೆ ಖ್ಯಾತಿಯ ಗಾಯಕಿ ಹಾಗೂ ಸಂಗೀತ ಗುರು ಶೀಲಾ ದಿವಾಕರ್ (53) ಬುಧವಾರ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಮೃತರು ಪತಿ, ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಮೆದುಳಿನ ರಕ್ತಸ್ರಾವಕ್ಕೆ ಒಳಗಾಗಿದ್ದ ಶೀಲಾ ದಿವಾಕರ್ ಕೆಲವು ದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಸಂಗೀತ ಕ್ಷೇತ್ರದಲ್ಲಿ ಕಳೆದ 30 ವರ್ಷಗಳಿಂದ ಸಕ್ರಿಯರಾಗಿದ್ದ ಅವರು ನೂರಾರು ಮಂದಿಗೆ ಸಂಗೀತ ತರಬೇತಿ ನೀಡಿದ್ದು, ಹಲವಾರು ಮಂದಿ ಮೇರು ಪ್ರತಿಭೆಗಳಾಗಿ ಹೊರ ಹೊಮ್ಮಿದ್ದಾರೆ. ಕರಾವಳಿ ಉತ್ಸವ, ಆಳ್ವಾಸ್ ನುಡಿಸಿರಿ, ಧರ್ಮಸ್ಥಳ ಮಹಾ ಮಸ್ತಕಾಭಿಷೇಕ, ಪರ್ಯಾಯ ಮಹೋತ್ಸವ ಸಹಿತ ರಾಜ್ಯಾದ್ಯಂತ 3,000ಕ್ಕೂ ಅಧಿಕ ಪ್ರಮುಖ ವೇದಿಕೆಗಳಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಭಾವಗೀತೆಗಳಿಂದ ಸಂಗೀತ ಕಾರ್ಯಕ್ರಮಗಳನ್ನು ನೀಡಿ ಜನರ ಪೀತಿಗೆ ಪಾತ್ರರಾಗಿದ್ದರು.

ಶೀಲಾ ದಿವಾಕರ್‌ಗೆ ಆರ್ಯಭಟ ಪ್ರಶಸ್ತಿ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ವಿದ್ವತ್ ಸನ್ಮಾನ ಸಹಿತ ಹಲವು ಪ್ರಶಸ್ತಿಗಳು ಲಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News