ದೇಶದಲ್ಲಿ ಕೋಮುವಾದಿ ಮನಸ್ಥಿತಿ ಹೇಗೆ ಕೆಲಸ ಮಾಡುತ್ತಿದೆ ಎಂಬುದಕ್ಕೆ ಜೀವಂತ ಉದಾಹರಣೆ: ಡಾ.ಎಚ್.ಸಿ.ಮಹದೇವಪ್ಪ

Update: 2022-01-27 11:57 GMT

ಬೆಂಗಳೂರು, ಜ.27: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆಗೆದು ಹಾಕಿದರೆ ಮಾತ್ರವೇ ಧ್ವಜಾರೋಹಣ ಮಾಡುವುದಾಗಿ ಬಾಬಾ ಸಾಹೇಬರ ವಿರಚಿತ ಕಾನೂನುಗಳನ್ನು ಕಾಪಾಡಲು ನೇಮಕವಾಗಿರುವ ನ್ಯಾಯಾಧೀಶರೇ ರಾಯಚೂರಿನಲ್ಲಿ ಹೇಳುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಇದು ಫ್ಯೂಡಲ್ ಹಾಗೂ ಕೋಮುವಾದಿ ಮನಸ್ಥಿತಿಯು ಈ ದೇಶದಲ್ಲಿ ಹೇಗೆ ಕೆಲಸ ಮಾಡುತ್ತಿದೆ ಎಂಬುದಕ್ಕೆ ಜೀವಂತ ಉದಾಹರಣೆ. ಇಂತಹ ಪೂರ್ವಾಗ್ರಹ ಪೀಡಿತ ನ್ಯಾಯಾಧೀಶರು ಇನ್ನೆಂತಹ ತೀರ್ಪು ನೀಡಬಲ್ಲರು? ಎಂದು ನೆನೆಸಿಕೊಂಡರೆ ಆತಂಕವಾಗುತ್ತದೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದ ಅವರು, ನ್ಯಾಯಾಂಗ ಎಂಬುದು ಜನ ಸಾಮಾನ್ಯರ ನಂಬಿಕೆಯ ಗೂಡು. ಅಂತಹ ನಂಬಿಕೆಯು ಕಳೆದು ಹೋಗುವುದಕ್ಕೆ ಅವಕಾಶ ನೀಡಬಾರದು. ಕೂಡಲೇ ಉಚ್ಚ ನ್ಯಾಯಾಲಯವು ಇಂತಹ ಬೇಜವಾಬ್ದಾರಿ ನ್ಯಾಯಾಧೀಶರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಡಾ.ಎಚ್.ಸಿ.ಮಹದೇವಪ್ಪ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News