ಮಂಗಳೂರು: ಉಡುಪುಗಳ ಮಳಿಗೆ 'ಕೋರಲ್ ಬುಟೀಕ್' ಶುಭಾರಂಭ

Update: 2022-01-27 10:52 GMT

ಮಂಗಳೂರು, ಜ.27: ಮದುವೆ, ಸಮಾರಂಭ ಹಾಗೂ ನಿತ್ಯ ಧರಿಸುವ ಉಡುಪುಗಳ ಮಳಿಗೆ 'ಕೋರಲ್ ಬುಟೀಕ್' ಗುರುವಾರ ನಗರದ ಕೆ.ಎಸ್.ರಾವ್ ರಸ್ತೆಯ ಬಳಿ ಇರುವ ಎಕ್ಸೆಲ್ ಮಿಸ್ಚಿಫ್ ಮಾಲ್ ನ ಒಂದನೇ ಮಹಡಿಯಲ್ಲಿ ಶುಭಾರಂಭಗೊಂಡಿತು.

ಝೈನುಲ್ ಉಲಮಾ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ದುಆ ನೆರವೇರಿಸಿದರು. ಅಲ್ ಅನ್ಸಾರ್ ಪತ್ರಿಕೆಯ ವ್ಯವಸ್ಥಾಪಕ ಜಿ.ಎಂ.ಮುಹಮ್ಮದ್ ಖಾಮಿಲ್ ಸಖಾಫಿ, ಪ್ರಕಾಶಕ ಇಕ್ಬಾಲ್ ಮುಈನುದ್ದೀನ್, ಅಬ್ದುಲ್ಲತೀಫ್, ಸುಫೈದ್ ಉಪಸ್ಥಿತರಿದ್ದರು.

ಸಂಸ್ಥೆಯ ಮಾಲಕ ಅಹ್ಮದ್ ಬಾವ ಡಿ.ಕೆ. ಸ್ವಾಗತಿಸಿದರು.

ಶೇ.5 ರಿಯಾಯಿತಿ: 'ಕೋರಲ್ ಬುಟೀಕ್' ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉಡುಪುಗಳನ್ನು ಮಿತ ದರಲ್ಲಿ ಒದಗಿಸುವ ಉದ್ದೇಶವನ್ನು ಹೊಂದಿದೆ. ಆರಂಭದ ಮೂರು ದಿನ ಶೇ.5 ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಉಡುಪುಗಳು ಸಿಗಲಿದೆ ಎಂದು ಸಂಸ್ಥೆಯ ಮಾಲಕ ಅಹ್ಮದ್ ಬಾವ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News