Airtel ಜತೆಗೆ Google ಮಹತ್ವದ ಒಪ್ಪಂದ; ಮುಂದಿನ ಐದು ವರ್ಷಗಳಲ್ಲಿ ರೂ. 7400 ಕೋಟಿ ಹೂಡಿಕೆ

Update: 2023-06-30 05:06 GMT
Editor : Saleeth Sufiyan

ಹೊಸದಿಲ್ಲಿ: ಗೂಗಲ್ ಸಂಸ್ಥೆಯು ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆ ಭಾರತಿ ಏರ್‌ಟೆಲ್‌ನಲ್ಲಿ ಬಹು-ವರ್ಷ ಒಪ್ಪಂದವೊಂದರಂತೆ 1 ಬಿಲಿಯನ್ ಡಾಲರ್ ತನಕ ಹೂಡಿಕೆ ಮಾಡಲಿದೆ. ಈ ಕುರಿತು ರೆಗ್ಯುಲೇಟರಿ ಫೈಲಿಂಗ್‌ನಲ್ಲಿ ತಿಳಿಸಿರುವ ಏರ್‌ಟೆಲ್, ಈ ಒಪ್ಪಂದದಂತೆ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಗೂಗಲ್ 1 ಬಿಲಿಯನ್ ಡಾಲರ್ (ಅಂದಾಜು ರೂ. 7,400 ಕೋಟಿ) ಹೂಡಿಕೆ ಮಾಡಲಿದೆ ಎಂದು ವರದಿಯಾಗಿದೆ.

ಈ ಒಪ್ಪಂದದ ಅನುಸಾರ ಗೂಗಲ್ ಸಂಸ್ಥೆಯು 700 ಮಿಲಿಯನ್ ಡಾಲರ್‌ನಷ್ಟು ಹಣವನ್ನು ಏರ್‌ಟೆಲ್ ಸಂಸ್ಥೆಯ ಶೇ. 1.28ರಷ್ಟು ಪಾಲುದಾರಿಕೆಯನ್ನು ತಲಾ ಷೇರಿಗೆ ರೂ. 734ರಂತೆ ಪಡೆದುಕೊಳ್ಳಲಿದೆ. ಇದರ ಹೊರತಾಗಿ ವಾಣಿಜ್ಯ ಒಪ್ಪಂದಗಳಾನುಸಾರ 300 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ.

"ವಿವಿಧ ದರ ಶ್ರೇಣಿಗಳಲ್ಲಿ ಕೈಗೆಟಕುವ ದರಗಳಲ್ಲಿ ಸ್ಮಾರ್ಟ್ ಫೊನ್ ಲಭ್ಯಗೊಳಿಸುವತ್ತ ಹೆಚ್ಚಿನ ಗಮನ ಕೇಂದ್ರೀಕರಣ, 5-ಜಿ ಮತ್ತಿತರ ಸಂಬಂಧಿತ ಸೌಲಭ್ಯಗಳ ಬಳಕೆಗೆ ಭಾರತಕ್ಕೆ ತಕ್ಕಂತಹ ನೆಟ್‌ವರ್ಕ್ ಡೊಮೇನ್ ರಚನೆಯನ್ನು ರಚಿಸಲು  ಸಹಭಾಗಿತ್ವ ಹಾಗೂ ಭಾರತದಾದ್ಯಂತ ಉದ್ಯಮಗಳಿಗೆ ಕ್ಲೌಡ್ ಇಕೋಸಿಸ್ಟಂ ಬಳಕೆಯನ್ನು ಇನ್ನಷ್ಟು ಹೆಚ್ಚಿಸುವತ್ತ ಈ ಪಾಲುದಾರಿಕೆ ಹೆಚ್ಚಿನ ಮಹತ್ವ ನೀಡಲಿದೆ,'' ಎಂದು ಏರ್‌ಟೆಲ್ ಹೇಳಿಕೆ ತಿಳಿಸಿದೆ.

ಇದನ್ನೂ ಓದಿ: Android, iOS ಗೆ ಪರ್ಯಾಯ ದೇಶೀಯ ಆಪರೇಟಿಂಗ್ ಸಿಸ್ಟಂ ಅಭಿವೃದ್ಧಿಗೆ ಸರಕಾರದ ಒಲವು

"ಹೊಸ ಉತ್ಪನ್ನಗಳ ಮೂಲಕ ಭಾರತದ ಡಿಜಿಟಲ್ ಕ್ಷೇತ್ರದಲ್ಲಿ ಏರ್‌ಟೆಲ್ ಮತ್ತು ಗೂಗಲ್ ಇನ್ನಷ್ಟು ಅಭಿವೃದ್ಧಿ ಸಾಧಿಸಲು ಶ್ರಮಿಸಲಿದೆ,'' ಎಂದು ಏರ್‌ಟೆಲ್ ಮುಖ್ಯಸ್ಥ ಸುನೀಲ್ ಭಾರತಿ ಮಿತ್ತಲ್ ಹೇಳಿದ್ದಾರೆ.

"ಏರ್‌ಟೆಲ್ ಜತೆಗೆ ಪಾಲುದಾರಿಕೆ ಹೊಂದಲು ಹಾಗೂ ಇನ್ನಷ್ಟು ಭಾರತೀಯರಿಗೆ ಅಂತರ್ಜಾಲ ಸೌಲಭ್ಯವನ್ನು ವಿಸ್ತರಿಸುವ ಹಂಚಿತ ಉದ್ದೇಶವನ್ನು ಹೊಂದಲು ಗೂಗಲ್ ಸಂತಸ ಪಡುತ್ತದೆ,'' ಎಂದು ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.

Writer - Saleeth Sufiyan

contributor

Editor - Saleeth Sufiyan

contributor

Similar News