ಇನ್ನು ವಾಟ್ಸ್ ಆ್ಯಪ್ ಗ್ರೂಪ್‍ಗಳಲ್ಲಿ ಗರಿಷ್ಠ 256 ಬದಲು 512 ಸದಸ್ಯರಿಗೆ ಅನುಮತಿ

Update: 2023-06-30 05:06 GMT

ಹೊಸದಿಲ್ಲಿ: ಕಳೆದ ಕೆಲ ವಾರಗಳಿಂದ ಹಲವಾರು ಹೊಸ ಫೀಚರ್‍ಗಳನ್ನು ಪರಿಚಯಿಸುತ್ತಿರುವ ವಾಟ್ಸ್ ಆ್ಯಪ್ ಸದ್ಯದಲ್ಲಿಯೇ ಬಹು ನಿರೀಕ್ಷೆಯ ಫೀಚರ್ ಒಂದನ್ನು ಹೊರತರಲಿದೆ. ವಾಟ್ಸ್ ಆ್ಯಪ್ ಗ್ರೂಪ್‍ಗಳಿಗೆ ಈ ಹಿಂದೆ 256 ಸದಸ್ಯರ ಮಿತಿಯಿದ್ದರೆ ಅದನ್ನೀಗ 512 ಸದಸ್ಯರಿಗೆ ಏರಿಸಲಾಗಿದ್ದು ಬೀಟಾ ಬಳಕೆದಾರರಿಗೆ ಈ ಹೊಸ ಫೀಚರ್ ಲಭ್ಯವಾಗಲಿದೆ. ಈ ಬದಲಾವಣೆಯು ಆ್ಯಪ್ ಗೂ ಶೀಘ್ರದಲ್ಲಿಯೇ ಲಭ್ಯವಾಗಲಿದೆ ಎಂದು ಕಳೆದ ವಾರ ಸಂಸ್ಥೆ ಹೇಳಿತ್ತು.

ಸದ್ಯ ಆಂಡ್ರಾಯ್ಡ್ ಮತ್ತು ಐಒಎಸ್‍ನಲ್ಲಿ ವಾಟ್ಸ್ ಆ್ಯಪ್ ಬೀಟಾ ಬಳಕೆದಾರರು ದೊಡ್ಡ ವಾಟ್ಸ್ಯಾಪ್ ಗ್ರೂಪ್‍ಗಳನ್ನು ರಚಿಸಬಹುದಾಗಿದೆ.

ಇದು ದೊಡ್ಡ ಸಂಸ್ಥೆಯ ಬಳಕೆದಾರರಿಗೆ ಅನುಕೂಲಕರವಾಗಿದ್ದರೂ ಈ ನಿಟ್ಟಿನಲ್ಲಿ ವಾಟ್ಸ್ ಆ್ಯಪ್ ತನ್ನ ಎದುರಾಳಿ ಟೆಲಿಗ್ರಾಂನಿಂದ ಇನ್ನೂ ಬಹಳಷ್ಟು ದೂರ ಇದೆ. ಟೆಲಿಗ್ರಾಂನಲ್ಲಿ ಒಂದು ಗುಂಪಿನಲ್ಲಿ ಗರಿಷ್ಠ 2 ಲಕ್ಷ ಬಳಕೆದಾರರು ಇರಬಹುದಾಗಿದೆ.

ಸದ್ಯ ವಾಟ್ಸ್ ಆ್ಯಪ್ ‍ನ ದೊಡ್ಡ ಗುಂಪುಗಳನ್ನು ಅನುಮತಿಸುವ ಫೀಚರ್ ಆಂಡ್ರಾಯ್ಡ್‍ನಲ್ಲಿ ಬೀಟಾ ಆವೃತ್ತಿ 2.22.12.10 ಮತ್ತು ಐಒಎಸ್ ನಲ್ಲಿ 22.10.0.70 ಆವೃತ್ತಿಯಲ್ಲಿ  ಲಭ್ಯವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News