ಬೆಂಗಳೂರು: ಕಾರಿನ ಕಿಟಕಿ ಗಾಜುಗಳನ್ನು ಒಡೆದು ಲ್ಯಾಪ್‍ಟಾಪ್ ಕಳವುಗೈದ ಪ್ರಕರಣ; ಮೂವರು ಆರೋಪಿಗಳ ಬಂಧನ
ಬೆಂಗಳೂರು, ಜ. 30: ಕಳವು ಆರೋಪ ಪ್ರಕರಣ ಸಂಬಂಧ ಮೂವರನ್ನು ಇಲ್ಲಿನ ಉಪ್ಪಾರಪೇಟೆ ಠಾಣಾ ಪೊಲೀಸರು ರವಿವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ರಜನಿಕಾಂತ್(48), ಸುಂದರ್(25), ಸೆಂಧಿಲ್ ಕುಮಾರ್(48) ಎಂದು ಡಿಸಿಪಿ ಡಾ.ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ನ.13ರಂದು ಬೆಳಗ್ಗೆ 11ರ ವೇಳೆ ಉಪ್ಪಾರಪೇಟೆಯಲ್ಲಿ ಕಾರು ನಿಲ್ಲಿಸಿ ಬೀಗ ಹಾಕದೇ ಹೋಗಿದ್ದು, ಬಳಿಕ ವಾಪಸ್ ಬಂದು ನೋಡುವಷ್ಟರಲ್ಲಿ ಕಾರಿನ ಕಿಟಕಿ ಗಾಜುಗಳನ್ನು ಒಡೆದು ಕಾರಿನಲ್ಲಿಟ್ಟಿದ್ದ ಲ್ಯಾಪ್‍ಟಾಪ್ ಅನ್ನು ಬ್ಯಾಗ್ ಸಮೇತ ಕಳವು ಮಾಡಲಾಗಿತ್ತು. ಈ ಸಂಬಂಧ ಉಪ್ಪಾರಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಬಂಧಿತರಿಂದ 50 ಸಾವಿರ ನಗದು ಸೇರಿ 1ಲಕ್ಷ 80 ಸಾವಿರ ಮೌಲ್ಯದ ಲ್ಯಾಪ್‍ಟಾಪ್‍ಗಳನ್ನು ಜಪ್ತಿ ಮಾಡಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಡಿಸಿಪಿ ಹೇಳಿದರು.
ಪಾರ್ಕಿಂಗ್ ಸ್ಥಳದಲ್ಲಿದ್ದ ಕಾರುಗಳ ಕಿಟಕಿ ಗಾಜುಗಳನ್ನು ಹೊಡೆದು ಬೆಲೆಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದ 3 ಆರೋಪಿಗಳ ಬಂಧಿಸಿ, ವರದಿಯಾಗಿದ್ದ 3 ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಸಫಲರಾದ #ಉಪ್ಪಾರಪೇಟೆ ಪೊಲೀಸರು @BlrCityPolice.
— Dr. Sanjeev M Patil, IPS (@DCPWestBCP) January 30, 2022
2 ಲ್ಯಾಪ್.ಟಾಪ್ ಗಳು & ನಗದು ಹಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿ ಕಾರ್ಯಚರಣೆ @UpparpetePS. pic.twitter.com/cSCQJug06x