×
Ad

ದರ ಏರಿಕೆ ವಿರುದ್ಧ ರಾಜ್ಯ ಮಟ್ಟದಲ್ಲಿ ಹೋರಾಟ: ಶಾಸಕ ಯುಟಿ ಖಾದರ್

Update: 2022-01-31 22:35 IST

ಉಳ್ಳಾಲ: ಸರ್ಕಾರ ಸದ್ದಿಲ್ಲದೆ ಕೆಎಸ್ಸಾರ್ಟಿಸಿ ದರ ಏರಿಕೆ ಮಾಡಿದೆ. ದರ ಏರಿಕೆ ಯಲ್ಲಿ ಸರ್ಕಾರ ನಿಯಂತ್ರಣ ಮಾಡದಿದ್ದಲ್ಲಿ ಬ್ಲಾಕ್ ಹಾಗೂ ರಾಜ್ಯ ಮಟ್ಟದಲ್ಲಿ ಹೋರಾಟ ಮಾಡಲಾಗುವುದು ಎಂದು ಶಾಸಕ ಯುಟಿ ಖಾದರ್ ಎಚ್ಚರಿಸಿದರು.

ಅವರು ಶಾಸಕಾಂಗ ಪಕ್ಷದ ಉಪನಾಯಕ ರಾಗಿ ಆಯ್ಕೆ ಯಾದ ಹಿನ್ನೆಲೆಯಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗಟ್ಟಿ ಸಮಾಜ ಭವನದಲ್ಲಿ  ಸೋಮವಾರ ನಡೆದ ಅಭಿನಂದನಾ ಕಾರ್ಯಕ್ರಮ ದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಪೆಟ್ರೋಲ್ ದರ ಏರಿಕೆಗೆ ಜನರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಪೆಟ್ರೋಲ್ ದರ ಏರಿಕೆ ನಿಂತಿದೆ. ಇದೀಗ ಬಸ್ ದರ ಏರಿಕೆ ಮಾಡುವ  ಹಾದಿ ಹಿಡಿದಿದೆ ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ  ಭಂಡಾರಿ, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಶಾಸಕಾಂಗ ಪಕ್ಷದ ಉಪನಾಯಕ ರಾಗಿ ಆಯ್ಕೆ ಯಾದ ಶಾಸಕ ಯು ಟಿ ಖಾದರ್ ಅವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮುಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್,ತಾ.ಪಂ.ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಶಾಲೆಟ್ ಪಿಂಟೊ, ಉಳ್ಳಾಲ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ರೈ,   ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಿಲ್ಪ್ರಡ್ , ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಪ್ಪಿ, ಮುಖಂಡರಾದ ದಯಾನಂದ ಪಿಲಿಕೂರು, ಕಲಾವತಿ, ಈಶ್ವರ ಉಳ್ಳಾಲ,  ಪುರುಷೋತ್ತಮ ಶೆಟ್ಟಿ, ರಶೀದ್ ಕೋಡಿ, ಉಳ್ಳಾಲ ನಗರ ಸಭಾ ಕೌನ್ಸಿಲರ್ ಮುಹಮ್ಮದ್ ಮುಕಚೇರಿ, ಟಿ.ಎಸ್ ಅಬ್ದುಲ್ಲಾ, ದೀಪಕ್ ಪಿಲಾರ್, ದಿನೇಶ್ ಕುಂಪಲ, ದಿನೇಶ್ ರೈ ,ಇಸುಬು ಬಾವಾ, ಲತೀಫ್, ಸತೀಶ್ ಉಳ್ಳಾಲ, ಕುಂಞಿಮೋನು, ರಮೇಶ್ ಶೆಟ್ಟಿ ಬೋಳಿಯಾರ್, ಫಿರೋಝ್ ಮಲಾರ್ ಮತ್ತಿತರರು ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಸ್ವಾಗತಿಸಿದರು. ಸುರೇಖಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News