ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರಕ್ಕೆ ಯುಟಿ ಖಾದರ್ ಭೇಟಿ
Update: 2022-01-31 22:38 IST
ಮಂಗಳೂರು : ವಿಧಾನಸಭೆಯ ವಿಪಕ್ಷ ಉಪ ನಾಯಕ ಯುಟಿ ಖಾದರ್ ಅವರು ಸೋಮವಾರ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರಕ್ಕೆ ಭೇಟಿ ನೀಡಿದರು.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯರಾದ ಕೆ. ಹರೀಶ್ ಕುಮಾರ್, ಮಂಜುನಾಥ್ ಭಂಡಾರಿ, ದೇವಸ್ಥಾನದ ಅಧ್ಯಕ್ಷ ಸಾಯಿರಾಂ ಹಾಗೂ ಕಾಂಗ್ರೆಸ್ ಮುಖಂಡರಾದ ವಿಶ್ವಾಸ ಕುಮಾರ್ ದಾಸ್, ಪ್ರಕಾಶ್ ಸಾಲ್ಯಾನ್, ಟಿ.ಕೆ. ಸುಧೀರ್, ಲತೀಫ್ ಕಂದಕ್, ರಜನೀಶ್, ಮುಹಮದ್ ಕುಂಜತ್ತಬೈಲ್, ರಾಕೇಶ್ ದೇವಾಡಿಗ, ಶಾಂತಲಾ ಗಟ್ಟಿ, ಮಂಜುಳಾ ನಾಯಕ್, ರಮಾನಂದ ಪೂಜಾರಿ, ಚೇತನ್ ಉರ್ವಾ, ಜಯರಾಜ್ ಕೋಟ್ಯಾನ್, ಯೋಗೀಶ್ ನಾಯಕ್, ಬಿ. ಪಿ. ಆಚಾರ್, ನಿರಂಜನ್, ಜಯರಾಮ್ ಕಾರಂದೂರ್, ರೂಪ ಚೇತನ್, ಸಮರ್ಥ ಭಟ್ ಉಪಸ್ಥಿತರಿದ್ದರು.