ಲಕ್ಷಾಂತರ ರೂ. ಹಣ ಇದ್ದ ಬ್ಯಾಗ್ ಕಳವು
Update: 2022-02-01 21:35 IST
ಬೈಂದೂರು, ಫೆ.1: ಅಂಗಡಿಗಳಿಗೆ ಲೈನ್ ಸೇಲ್ ಮಾಡುವ ವಾಹನದಲ್ಲಿದ್ದ ಲಕ್ಷಾಂತರ ರೂ. ನಗದು ಸಹಿತ ಬ್ಯಾಗ್‌ನ್ನು ಕಳ್ಳರು ಕಳವು ಮಾಡಿರುವ ಘಟನೆ ಜ.31ರಂದು ಸಂಜೆ ವೇಳೆ ನಾವುಂದ ಅರೆಹೊಳೆ ಕ್ರಾಸ್ ರಸ್ತೆಯ ಬಳಿ ನಡೆದಿದೆ.
ನಂದಿನಿ ಏಜೆನ್ಸಿಯ ರಾಮಚಂದ್ರ ಕಾರಂತ ಗೂಡ್ಸ್ ವಾಹನದಲ್ಲಿ ಅಂಗಡಿ ಗಳಿಗೆ ಹೋಲ್ ಸೇಲ್ ರೀತಿಯಲ್ಲಿ ದಿನಸಿ ಸಾಮಗ್ರಿಗಳನ್ನು ಸರಬರಾಜು ಮಾಡಿ, ಅದರಿಂದ ಬಂದ ಹಣವನ್ನು ಬ್ಯಾಗ್ನಲ್ಲಿ ಹಾಕಿಕೊಂಡು ನಾವುಂದಕ್ಕೆ ಬಂದಿದ್ದರು. ಅಲ್ಲಿ ಅಂಗಡಿಯೊಂದಕ್ಕೆ ತೆರಳಿ ಸಾಮಗ್ರಿಗಳನ್ನು ಹಾಕುತ್ತಿರುವಾಗ ವಾಹನದಲ್ಲಿ ಇಟ್ಟಿದ್ದ 2 ಲಕ್ಷ 6 ಸಾವಿರ ರೂ. ಮತ್ತು ಚಿಲ್ಲರೆ ಹಣ 6 ಸಾವಿರ ರೂ. ಹಾಗೂ 3 ಬ್ಲ್ಯಾಂಕ್ ಚೆಕ್ ಇದ್ದ ಬ್ಯಾಗ್ ಕಳವು ಮಾಡಿರುವು ದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.