×
Ad

ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಬಳಸುವಂತೆ ದ.ಕ. ಜಿಲ್ಲಾಧಿಕಾರಿ ಸೂಚನೆ

Update: 2022-02-01 22:11 IST
ಸಾಂದರ್ಭಿಕ ಚಿತ್ರ

ಮಂಗಳೂರು, ಫೆ.1: ರಾ.ಹೆ. 169 (ಹಳೆಯ ರಾ.ಹೆ.-13) ಮಂಗಳೂರು-ಶೋಲಾಪುರ ರಸ್ತೆಯ ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಕಿ.ಮೀ. 712.500 (ನ್ಯೂ ಪಡಿವಾಲ್ ಹೊಟೇಲ್ ಬಳಿ) ರಲ್ಲಿ ಪ್ರವಾಹ ಹಾನಿ ದುರಸ್ತಿ ಯೋಜನೆಯಡಿ ಮೋರಿ ಪುನರ್ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಹಾಗಾಗಿ ಫೆ. 2ರಿಂದ ಮಾರ್ಚ್3ರವರೆಗೆ ಎಲ್ಲಾ ವಿಧದ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.

ವೇಣೂರು ಹಾಗೂ ಬಂಟ್ವಾಳದಿಂದ ಕಾರ್ಕಳಕ್ಕೆ ಹೋಗುವ ವಾಹನಗಳು ಹನುಮಾನ್ ದೇವಸ್ಥಾನ, ಸ್ವರಾಜ್ ಮೈದಾನ, ರಿಂಗ್ ರೋಡ್, ಅಲಂಗಾರು ಮೂಲಕ ಕಾರ್ಕಳ ತಲುಪಬಹುದು.

ಮಂಗಳೂರು ಹಾಗೂ ಮುಲ್ಕಿ, ಕಿನ್ನಿಗೋಳಿಯಿಂದ ಕಾರ್ಕಳಕ್ಕೆ ಹೋಗುವ ವಾಹನಗಳು ಸ್ವರಾಜ್ ಮೈದಾನ, ರಿಂಗ್ ರೋಡ್, ಅಲಂಗಾರು ಮೂಲಕ ಕಾರ್ಕಳ ತಲುಪಬಹುದು.

ಮಂಗಳೂರಿನಿಂದ ಶಿರ್ತಾಡಿ-ಹೊಸ್ಮಾರ್‌ಗೆ ಹೋಗುವ ವಾಹನಗಳು: ಸ್ವರಾಜ್ ಮೈದಾನ, ರಿಂಗ್‌ರೋಡ್, ಅಲಂಗಾರು ಜೈನ್ ಪೇಟೆ ಮೂಲಕ ಶಿರ್ತಾಡಿ ಕಡೆಗೆ ಸಂಚರಿಸಬಹುದು.

ಹೊಸ್ಮಾರು, ಶಿರ್ತಾಡಿಯಿಂದ ಹೋಗುವ ವಾಹನಗಳು ಅಲಂಗಾರು, ರಿಂಗ್ ರೋಡ್, ಸ್ವರಾಜ್ ಮೈದಾನದ ಮೂಲಕ ಮಂಗಳೂರಿಗೆ ಸಂಚರಿಸಬಹುದು.

ಕಾರ್ಕಳದಿಂದ ಮಂಗಳೂರು, ಮುಲ್ಕಿ ಹಾಗೂ ಕಿನ್ನಿಗೋಳಿಗೆ ಹೋಗುವ ವಾಹನಗಳು ಅಲಂಗಾರು-ರಿಂಗ್‌ರೋಡ್-ಸ್ವರಾಜ್ ಮೈದಾನದ ಮೂಲಕ ಸಂಚರಿಸಬಹುದು ಎಂದು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News