ಫುಟ್ ಬೋರ್ಡ್‌ನಲ್ಲಿ ಪ್ರಯಾಣ: ಬಸ್ ಕಂಡೆಕ್ಟರ್‌ಗೆ ದಂಡ
Update: 2022-02-01 22:15 IST
ಮಂಗಳೂರು, ಫೆ.1: ನಗರದ ಸ್ಟೇಟ್‌ಬ್ಯಾಂಕ್-ಬೋಂದೆಲ್ ನಡುವೆ ಸಂಚರಿಸುವ ಖಾಸಗಿ ಸಿಟಿ ಬಸ್‌ನ ಫುಟ್ ಬೋರ್ಡ್ ನಲ್ಲಿ ನೇತಾಡಿಕೊಂಡು ವಿದ್ಯಾರ್ಥಿಗಳು ಪ್ರಯಾಣಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ಬಸ್ ಕಂಡೆಕ್ಟರ್‌ಗೆ ದಂಡ ವಿಧಿಸಿದ್ದಾರೆ.
ಬಸ್‌ನ ಫುಟ್ ಬೋರ್ಡ್ ನಲ್ಲೇ ಹಲವು ವಿದ್ಯಾರ್ಥಿಗಳು ನೇತಾಡಿಕೊಂಡಿದ್ದರೆ. ವಿದ್ಯಾರ್ಥಿನಿಯೋರ್ವಳು ಫುಟ್ ಬೋರ್ಡ್ ನಲ್ಲಿ ತೀರಾ ಅಪಾಯಕಾರಿ ರೀತಿಯಲ್ಲಿ ನೇತಾಡುತ್ತಾ ಪ್ರಯಾಣಿಸುತ್ತಿದ್ದರು. ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಕ್ರಮಕ್ಕ ಸೂಚಿಸಿದ್ದು, ಅದರಂತೆ ಮಂಗಳೂರು ಸಂಚಾರ ಠಾಣೆಯ ಪೊಲೀಸರು ದಂಡ ವಿಧಿಸಿದ್ದಾರೆ.