ಸುರತ್ಕಲ್: ತಂಡದಿಂದ ಯುವಕನ ಕೊಲೆಯತ್ನ
ಮಂಗಳೂರು, ಫೆ.2: ತಂಡವೊಂದು ಯುವಕನ ಕೊಲೆಗೆ ಯತ್ನಿಸಿದ ಘಟನೆ ಮಂಗಳವಾರ ತಡರಾತ್ರಿ ಕಾಟಿಪಳ್ಳದಲ್ಲಿ ನಡೆದಿದೆ. ಗಂಭೀರ ಗಾಯಗೊಂಡ ಯುವಕನನ್ನು ನಗರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಕಾಟಿಪಳ್ಳದ ಮುಹಮ್ಮದ್ ಅನಸ್ (29) ಗಂಭೀರ ಗಾಯಗೊಂಡ ಯುವಕನಾಗಿದ್ದಾನೆ.
ಬಾಡಿಗೆ ಮನೆ ತೆರವು ವಿಚಾರಕ್ಕೆ ಸಂಬಂಧಿಸಿ ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಮುಹಮ್ಮದ್ ಅನಸ್ ತನ್ನ ಸ್ನೇಹಿತರಾದ ಅಬೂಬಕರ್ ಮತ್ತು ಹ್ಯಾರಿಸ್ ಅವರೊಂದಿಗೆ 6ನೇ ಬ್ಲಾಕ್‌ನ ಮನೆಯ ಮುಂದೆ ನಿಂತು ಮಾತನಾಡುತ್ತಿದ್ದಾಗ ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ಆಗಮಿಸಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಕಾಟಿಪಳ್ಳ-ಕೃಷ್ಣಾಪುರ ನಿವಾಸಿಗಳಾದ ರವೂಫ್, ಮುಸ್ತಫಾ ಮತ್ತಿತರರ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳು - ಪೋಷಕರೊಂದಿಗೆ ಶಾಸಕ ಹಾಲಾಡಿ ಸಭೆ