2017ರಿಂದ ಒಳಚರಂಡಿ, ಶೌಚಗುಂಡಿ ಸ್ವಚ್ಚಗೊಳಿಸುವ ಸಂದರ್ಭ 321 ಜನರು ಸಾವು: ಕೇಂದ್ರ

Update: 2022-02-02 17:44 GMT

ಹೊಸದಿಲ್ಲಿ, ಫೆ. 2: 2017ರಿಂದ ಒಳಚರಂಡಿ ಹಾಗೂ ಶೌಚಗುಂಡಿ ಸ್ವಚ್ಛಗೊಳಿಸುವ ಸಂದರ್ಭ 2021ರಲ್ಲಿ 22 ಮಂದಿ ಸೇರಿದಂತೆ ಒಟ್ಟು 321 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಸರಕಾರ ಬುಧವಾರ ಹೇಳಿದೆ.

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಕೇಂದ್ರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆಯ ಸಹಾಯಕ ಸಚಿವ ರಾಮದಾಸ್ ಅಠಾವಳೆ, ಒಳಚರಂಡಿ ಹಾಗೂ ಶೌಚಗುಂಡಿ ಸ್ವಚ್ಛಗೊಳಿಸುವ ಸಂದರ್ಭ ಒಟ್ಟು 321 ಮಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ 259 ಮಂದಿಗೆ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು. ‌

ದತ್ತಾಂಶದ ಪ್ರಕಾರ ಒಳಚರಂಡಿ ಹಾಗೂ ಶೌಚಗುಂಡಿ ಸ್ವಚ್ಛಗೊಳಿಸುವ ಸಂದರ್ಭ 2017ರಲ್ಲಿ 93 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ, 81 ಮಂದಿಗೆ ಪರಿಹಾರ ಪಾವತಿಸಲಾಗಿದೆ. 2018ರಲ್ಲಿ 70 ಮಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ 62 ಮಂದಿಗೆ ಪರಿಹಾರ ನೀಡಲಾಗಿದೆ. 2019ರಲ್ಲಿ ಒಟ್ಟು 117 ಮಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ 80 ಮಂದಿಗೆ ಪರಿಹಾರ ಒದಗಿಸಲಾಗಿದೆ. 2020ರಲ್ಲಿ 19ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ 14 ಮಂದಿಗೆ ಪರಿಹಾರ ನೀಡಲಾಗಿದೆ.

ಕಳೆದ ವರ್ಷ ಒಳಚರಂಡಿ ಹಾಗೂ ಶೌಚಗುಂಡಿ ಸ್ವಚ್ಚಗೊಳಿಸುವ ಸಂದರ್ಭ 22 ಮಂದಿ ಸಾವನ್ನಪ್ಪಿದ್ದಾರೆ. ಅವರೆಲ್ಲರಿಗೂ ಪರಿಹಾರ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News