1,034 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣ: ಮುಂಬೈ ಉದ್ಯಮಿ ಬಂಧನ

Update: 2022-02-03 05:50 GMT

ಹೊಸದಿಲ್ಲಿ/ಮುಂಬೈ: ಮುಂಬೈನಲ್ಲಿ 'ಚಾಲ್' ಮರು ಅಭಿವೃದ್ಧಿಗೆ ಸಂಬಂಧಿಸಿದ  1,034 ಕೋಟಿ ರೂ. ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯಲ್ಲಿ ಮಹಾರಾಷ್ಟ್ರ ಮೂಲದ ಉದ್ಯಮಿಯೊಬ್ಬರನ್ನು ಜಾರಿ ನಿರ್ದೇಶನಾಲಯ ಬುಧವಾರ ಬಂಧಿಸಿದೆ.

ಗುರು ಆಶಿಶ್ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯ ಮಾಜಿ ನಿರ್ದೇಶಕ ಪ್ರವೀಣ್ ರಾವತ್ ಅವರನ್ನು ಮುಂಬೈನ ಈಡಿ ಕಚೇರಿಯಲ್ಲಿ ವಿಚಾರಣೆ ನಡೆಸಿದ ನಂತರ ಬಂಧಿಸಲಾಗಿದೆ.

ಆತನಿಗೆ ಸಂಬಂಧಿಸಿದ ಕಟ್ಟಡವನ್ನು ಮಂಗಳವಾರ ಏಜೆನ್ಸಿಯಿಂದ ಶೋಧಿಸಲಾಯಿತು.

ರಾವತ್ ಅವರನ್ನು ಮುಂಬೈನ ವಿಶೇಷ ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆಕ್ಟ್ (ಪಿಎಂಎಲ್‌ಎ) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಫೆಬ್ರವರಿ 9 ರವರೆಗೆ ಎಂಟು ದಿನಗಳ ಕಾಲ ಈಡಿ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News