ಉತ್ತರಪ್ರದೇಶದಲ್ಲಿ ದಶಕಗಳಲ್ಲಿ ಮಾಡದೇ ಇರುವುದನ್ನು 5 ವರ್ಷಗಳಲ್ಲಿ ಮಾಡಲಾಗಿದೆ: ಆದಿತ್ಯನಾಥ್

Update: 2022-02-03 07:13 GMT

ಲಕ್ನೊ: ಉತ್ತರ ಪ್ರದೇಶವು 1947 ಮತ್ತು 2017 ರ ನಡುವೆ  ದೇಶದ ಹಲವಾರು ಸೂಚ್ಯಂಕಗಳಲ್ಲಿ ಆರು ಅಥವಾ ಏಳನೇ ಸ್ಥಾನದಲ್ಲಿತ್ತು.  ಆದರೆ ಬಿಜೆಪಿ ಸರಕಾರವು ಆರ್ಥಿಕತೆಯು ಎರಡನೇ ಸ್ಥಾನವನ್ನು ತಲುಪಲು ಸಹಾಯ ಮಾಡಿದೆ ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಅವರು ರಾಜ್ಯ ಚುನಾವಣೆಗೆ ಮುಂಚಿತವಾಗಿ ಬಿಜೆಪಿಯ ಪ್ರಚಾರ ವೀಡಿಯೊವನ್ನು ಬಿಡುಗಡೆ ಮಾಡಿದ ಬಳಿಕ ಹೇಳಿದರು.

"ದಶಕಗಳಲ್ಲಿ ಮಾಡಲಾಗದ್ದನ್ನು ಕೇವಲ 5 ವರ್ಷಗಳಲ್ಲಿ ಮಾಡಲಾಗಿದೆ ಎಂದು ಬಿಂಬಿಸಲು ಬಯಸುತ್ತೇನೆ. ಇಂದು ಉತ್ತರಪ್ರದೇಶವು ಭಾರತದಲ್ಲಿ 2 ನೇ ಸ್ಥಾನದಲ್ಲಿದೆ" ಎಂದು ಅವರು ಹೇಳಿದರು.

"ತಮ್ಮ ಸರಕಾರವು ತನ್ನ ಎಲ್ಲಾ ಪ್ರಮುಖ ಉದ್ದೇಶಗಳನ್ನು ಸಾಧಿಸಿದ.   ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಜನರಿಗಾಗಿ ತನ್ನ ಕರ್ತವ್ಯವನ್ನು ಮಾಡಿದೆ'' ಎಂದು ಪ್ರತಿಪಾದಿಸಿದ ಅವರು, “ಕಳೆದ ಎರಡು ವರ್ಷಗಳು ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಉತ್ತರಪ್ರದೇಶಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಸವಾಲಾಗಿತ್ತು. ಇದು ಕೇವಲ ಜೀವನಕ್ಕಾಗಿ ಮಾತ್ರವಲ್ಲ, ಜೀವನೋಪಾಯಕ್ಕೂ ಬೆದರಿಕೆ ಆಗಿತ್ತು.  ಆದರೆ ರಾಷ್ಟ್ರವನ್ನು ಮುನ್ನಡೆಸಿದ್ದಕ್ಕಾಗಿ ಹಾಗೂ  ಸವಾಲಿನಿಂದ ಮೇಲೇರಲು ಸಹಾಯ ಮಾಡಿದ್ದಕ್ಕಾಗಿ ನಾನು ಪ್ರಧಾನ ಮಂತ್ರಿಗೆ ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಆದಿತ್ಯನಾಥ್  ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News