ಫೆ. 5: ವಿದ್ಯುತ್ ವ್ಯತ್ಯಯ
Update: 2022-02-04 22:06 IST
ಮಂಗಳೂರು, ಫೆ.4: ನಗರದ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿ ನಡೆಯಲಿದೆ. ಹಾಗಾಗಿ ಫೆ.5ರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಹ್ಯಾಮಿಲ್ಟನ್ ಸರ್ಕಲ್, ಡಿ.ಸಿ ಆಫೀಸ್, ಸೈಂಟ್ ಆ್ಯನ್ಸ್, ನೀಲೇಶ್ವಾಲ್ಯ ರೋಡ್, ಬದ್ರಿಯಾ ರೋಡ್, ಗೂಡ್‌ಶೆಡ್ ರೋಡ್, ಧಕ್ಕೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.