ಫಲಾಹ್ ಕಾಲೇಜಿನಲ್ಲಿ ವಾರ್ಷಿಕ ಪ್ರಶಸ್ತಿ ವಿತರಣೆ, ಫೋಷಕರ ಸಮಾಲೋಚಣೆ ಸಭೆ

Update: 2022-02-05 11:32 GMT

ತಲಪಾಡಿ: ಕೆ.ಸಿ ರೋಡ್ ನ ವಿದ್ಯಾನಗರದ ಫಲಾಹ್ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಪ್ರಶಸ್ತಿ ವಿತರಣೆ ಹಾಗೂ ಪೋಷಕರ ಸಮಾಲೋಚನೆ ಸಭೆಯು ಸಂಸ್ಥೆಯ ಆಡಳಿತ ಮಂಡಳಿ, ಫಲಾಹ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಹಾಜಿ ಯು.ಬಿ ಮೊಹಮ್ಮದ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಸ್ಥೆಯ ಸದಸ್ಯ ಇಸ್ಮಾಯಿಲ್ ತಲಪಾಡಿ ಸಾಂದರ್ಭಿಕವಾಗಿ ಮಾತಾಡಿದರು. ಸಂಸ್ಥೆಯ ಪ್ರಾಂಶುಪಾಲ ಅಬ್ದುಲ್ ಖಾದರ್ ಹುಸೈನ್ ಪಡುಬಿದ್ರಿ ಪ್ರಾಸ್ತಾವಿಕವಾಗಿ ಮಾತಾಡಿದರು.

ವೇದಿಕೆಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಜಿ ಎನ್ ಅರಬಿ ಕುಂಞಿ, ಕೋಶಾಧಿಕಾರಿ ಕೆ.ಎಂ, ಅಬ್ಬಾಸ್ ಮಜಲ್, ಕಾಲೇಜು ವಿದ್ಯಾರ್ಥಿ ನಾಯಕಿ ಫಾತಿಮತುಲ್ ತಂಶೀರಾ ಉಪಸ್ಥಿತರಿದ್ದರು. ವಿಧ್ಯಾರ್ಥಿನಿ ಸಮ್ರತ್ ಕಾಲೇಜಿನ ವಾರ್ಷಿಕ ವರದಿಯನ್ನು ವಾಚಿಸಿದರು. ದ್ವಿತೀಯ ಪಿಯು ವಿದ್ಯಾರ್ಥಿನಿ ಫಾತಿಮತುಲ್ ತಂಶೀರಾರವರಿಗೆ ಅತ್ಯುತ್ತಮ ವಾರ್ಷಿಕ ವಿದ್ಯಾರ್ಥಿನಿ ಪ್ರಶಸ್ತಿ ಈ ಸಂದರ್ಭದಲ್ಲಿ ನೀಡಲಾಯಿತು.

ವಿದ್ಯಾಭ್ಯಾಸದಲ್ಲಿ ಪ್ರಥಮ ಪಿಯು ವಿದ್ಯಾರ್ಥಿನಿ ಸೈಬುನ್ನಿಸಾ ಮತ್ತು ದ್ವಿತೀಯ ಪಿ.ಯು ವಿದ್ಯಾರ್ಥಿನಿ ಹಲೀಮತ್ ಸಹದಿಯ್ಯ ಪ್ರಶಸ್ತಿ ಪಡೆದರು.

ಉಪನ್ಯಾಸಕಿಯರಾದ ದೀಪಿಕಾ ಮತ್ತು ಸಾಂಡ್ರಾ ಡಿ ಸೋಝ ಪ್ರಶಸ್ತಿ ವಿಜೇತರ ಪಟ್ಟಿಯನ್ನು ವಾಚಿಸಿದರು. ಫರ್ಝಾನ ಕಾರ್ಯಕ್ರಮ ನಿರ್ವಹಿಸಿದರು. ಸೈಫತ್ ಸ್ವಾಗತಿಸಿದರು. ಖತೀಜತ್ ಮುನವ್ವರ ವಂದಿಸಿದರು.

ಶೈಕ್ಷಣಿಕ ವರ್ಷದಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಈ ಸಂದರ್ಭ ಬಹುಮಾನ ನೀಡಲಾಯಿತು. ಕಾರ್ಯಕ್ರಮದ ಉಸ್ತುವಾರಿಯನ್ನು ಉಪನ್ಯಾಸಕಿಯರಾದ ರೇವತಿ ಎನ್ ರೈ ಮತ್ತು ಅರ್ಪಿತಾ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News