×
Ad

ಗಾಂಜಾ ಸೇವನೆ ಆರೋಪ; ಐದು ಮಂದಿ ಸೆರೆ

Update: 2022-02-05 22:28 IST

ಉಳ್ಳಾಲ: ಇಲ್ಲಿನ ಠಾಣಾ ವ್ಯಾಪ್ತಿಯ ಸೋಮೇಶ್ವರ ದಲ್ಲಿ ಗಾಂಜಾ ಸೇವನೆಯಲ್ಲಿ ನಿರತರಾಗಿದ್ದ ಐದು ಮಂದಿ ಯನ್ನು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ ಘಟನೆ ಶನಿವಾರ ಸಂಜೆ ನಡೆದಿದೆ.

ಬಂಧಿತರನ್ನು  ಬಂಗ್ರಕೂಳೂರು ನಿವಾಸಿಗಳಾದ ಸಾಗರ್ (20), ಧನುಶ್ (26), ಪಚ್ಚನಾಡಿ ನಿವಾಸಿ ವಿಶಾಖ್ (20) ಕೂಳೂರು ಕೈರಂಗಳ ನಿಲಯ ನಿವಾಸಿ ಹರ್ಷ (20) ಮತ್ತು  ಕೂಳೂರು ನಿವಾಸಿ ಧನುಷ್ (21) ಎಂದು ಗುರುತಿಸಲಾಗಿದೆ.

ಅವರು ಸೋಮೇಶ್ವರ ಬಳಿ ಗಾಂಜಾ ಸೇವನೆ ಕಾರ್ಯದಲ್ಲಿ ನಿರತವಾಗಿದ್ದರು ಎನ್ನಲಾಗಿದೆ. ಈ ಬಗೆ ಮಾಹಿತಿ ಮೇರೆಗೆ ದಾಳಿ ನಡೆಸಿದ ಉಳ್ಳಾಲ ಪೊಲೀಸರು ಐವರನ್ನು ಬಂಧಿಸಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದಾಗ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಐವರನ್ನು ಬಂಧಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News