ಡೊಂಗರಕೇರಿ: ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ
Update: 2022-02-06 19:42 IST
ಮಂಗಳೂರು, ಫೆ,6: ನಗರದ ಪ್ರಮುಖ ರಾಜಕಾಲುವೆಗಳಿಂದ ಮಳೆಗಾಲದಲ್ಲಿ ನೀರು ಉಕ್ಕಿ ಹರಿದು ಉಂಟಾ ಗುವ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ರಾಜಕಾಲುವೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಗೊಳಿಸಲಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ಡೊಂಗರಕೇರಿ ವಾರ್ಡಿನ ಬೋಜರಾಜ್ ರಾವ್ ಸೇತುವೆಯಿಂದ ಕುದ್ರೋಳಿ ಸೇತುವೆಯವರೆಗಿನ ರಾಜಕಾಲುವೆಯ ಆಯ್ದ ಭಾಗಗಳಲ್ಲಿ 1.5 ಕೋ.ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಸಂದರ್ಭ ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆಯ ಲೆಕ್ಕಪತ್ರ ಸ್ಥಾಯಿ ಸಮಿತಿಯ ಅಧ್ಯಕ್ಷೆ ಲೀಲಾವತಿ ಪ್ರಕಾಶ್, ಸ್ಥಳೀಯ ಕಾರ್ಪೊರೇಟರ್ ಜಯಶ್ರೀ ಕುಡ್ವ, ಮಾಜಿ ಉಪ ಮೇಯರ್ ರಾಜೇಂದ್ರ, ಡೊಂಗರಕೇರಿ ವೆಂಕಟರಮಣ ದೇವಸ್ಥಾನದ ಟ್ರಸ್ಟಿಗಳಾದ ವರದರಾಯ ನಾಗ್ವೇಕರ್, ವಿನಾಯಕ್ ಶೇಟ್ ಮತ್ತಿತರರು ಪಾಲ್ಗೊಂಡಿದ್ದರು.