ಮಂಗಳೂರು ವಿಮಾನ ನಿಲ್ದಾಣ; ಚಿನ್ನ ಅಕ್ರಮ ಸಾಗಾಟ ಪತ್ತೆ
Update: 2022-02-06 22:19 IST
ಮಂಗಳೂರು, ಫೆ.6: ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕನಿಂದ ಚಿನ್ನ ಅಕ್ರಮ ಸಾಗಾಟವನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ರವಿವಾರ ಪತ್ತೆ ಹಚ್ಚಿದ್ದಾರೆ.
ಪ್ರಯಾಣಿಕನ ಲಗ್ಗೇಜನ್ನು ತಪಾಸಣೆ ಮಾಡಿದಾಗ ಅಲಂಕಾರಿಕ ವಸ್ತುಗಳಲ್ಲಿ 24 ಕ್ಯಾರೆಟ್‌ನ ಸುಮಾರು 127 ಗ್ರಾಂ ತೂಕದ ಚಿನ್ನವನ್ನು ಬಚ್ಚಿಟ್ಟಿರುವುದು ಕಂಡು ಬಂತು. ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇದರ ಮೌಲ್ಯ 6,27,380 ರೂ. ಎಂದು ಅಂದಾಜಿಸಲಾಗಿದೆ.