×
Ad

ಮಂಗಳೂರು: ಗಾಂಜಾ ಸಹಿತ ಆರೋಪಿ ಸೆರೆ

Update: 2022-02-06 22:24 IST

ಮಂಗಳೂರು : ತೊಕ್ಕೊಟ್ಟು ಸಮೀಪದ ಸೋಮೇಶ್ವರದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ 50 ಸಾವಿರ ರೂ. ಮೌಲ್ಯದ ಗಾಂಜಾ ಪತ್ತೆ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.

ಹರ್ಷವರ್ಧನ ಬಂಧಿತ ಆರೋಪಿಯಾಗಿದ್ದು, ಈತ ಕಾಲೇಜು ವಿದ್ಯಾರ್ಥಿಗಳ ಸಹಿತ ಇತರರಿಗೆ ಮಾರಾಟ ಮಾಡಲು ಗಾಂಜಾ ತಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅಬಕಾರಿ ಎಸ್ಸೈ ಸುಧೀರ್ ಎ., ಉಮೇಶ್ ಎಚ್., ಕಾನ್‌ಸ್ಟೇಬಲ್‌ಗಳಾದ ಸಂತೋಷ್, ಮಾರುತಿ ಡಿ.ಜೆ., ನವೀನ್ ನಾಯ್ಕ, ವಾಹನ ಚಾಲಕ ಶಿವಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News