×
Ad

"ದಂಡುಪಾಳ್ಯ ಊರಿನವರಿಗೆ ಮನೆ ಬಾಡಿಗೆಗೆ ಕೊಡಬಹುದೆ?": ಪೊಲೀಸರ ಮೊರೆಹೋದ ಮಾಲಕ !

Update: 2022-02-08 19:52 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಫೆ.8: ದಂಡುಪಾಳ್ಯ ಊರಿನವರಿಗೆ ರಾಜಧಾನಿ ಬೆಂಗಳೂರಿನಲ್ಲಿ ಮನೆ ಬಾಡಿಗೆ ನೀಡಬೇಕೆ ಎಂದು ಮನೆ ಮಾಲಕನೋರ್ವ ಪೊಲೀಸರಿಗೆ ಪ್ರಶ್ನಿಸಿ, ಸಲಹೆ ಪಡೆದಿದ್ದಾನೆ.

ದಂಡುಪಾಳ್ಯ ಸಿನೆಮಾದಲ್ಲಿ ಅಪರಾಧ ಚಟುವಟಿಕೆಗಳ ಕುರಿತು ಉಲ್ಲೇಖಿಸಲಾಗಿದೆ. ಈ ಸಿನಿಮಾ ನೋಡಿದ ಬೆಂಗಳೂರಿನ ಮನೆ ಮಾಲಕ ಕೃಷ್ಣಮೂರ್ತಿ ಎಂಬುವರ ಪೊಲೀಸರಿಗೆ ಈ ರೀತಿ ಪ್ರಶ್ನಿಸಿದ್ದಾರೆ.

ಮನೆಗೆ ಇತ್ತೀಚೆಗೆ ಓರ್ವ ಬಾಡಿಗೆದಾರ ಬಂದಿದ್ದು, ಅವರ ಆಧಾರ್‍ಕಾರ್ಡ್‍ನಲ್ಲಿ ಹಳ್ಳಿಯ ಹೆಸರನ್ನು ದಂಡುಪಾಳ್ಯ ಎಂದು ನಮೂದಿಸಲಾಗಿದೆ. ಇದರಿಂದ ಆತಂಕ ವ್ಯಕ್ತವಾಗಿದ್ದು, ದಂಡುಪಾಳ್ಯದವರಿಗೆ ಮನೆ ಬಾಡಿಗೆ ಕೊಡಬಹುದೇ ಎಂದು ಟ್ವೀಟ್ ಮೂಲಕ ಪೆÇಲೀಸರ ಸಲಹೆ ಕೇಳಿದ್ದಾರೆ.

ಆಧಾರ್‍ಕಾರ್ಡ್ ಪರಿಶೀಲಿಸಿದಾಗ ಅದರಲ್ಲಿ ಅವರ ಹಳ್ಳಿಯ ಹೆಸರನ್ನು ದಂಡುಪಾಳ್ಯ ಎಂದು ನಮೂದಿಸಲಾಗಿದೆ. ಈ ಹಳ್ಳಿಯ ಜನರು ಕ್ರೂರವಾಗಿ ಕೊಲೆ ಮಾಡುತ್ತಾರೆ. ಈ ಕುರಿತು ನಾನು ಚಲನಚಿತ್ರಗಳನ್ನು ನೋಡಿದ್ದೇನೆ. ಈಗ ಅವರಿಗೆ ಮನೆ ಬಾಡಿಗೆ ಕೊಟ್ಟರೆ ಸರಿಯೇ. ದಯವಿಟ್ಟು ನನಗೆ ನೀವು ಸಹಾಯ ಮಾಡಬಹುದೇ ಎಂದು ಮನೆ ಮಾಲಕ ಮನವಿ ಇಟ್ಟಿದ್ದಾರೆ.

ಟ್ವೀಟ್ ಮೂಲಕ ನಗರ ಪೊಲೀಸರಿಗೆ ವ್ಯಕ್ತಿ ಟ್ಯಾಗ್ ಮಾಡಿದ್ದಾರೆ. ಇದಕ್ಕೆ ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ. ನಿಮಗೆ ಅವರು ಸಲಹೆ ಮಾಡುತ್ತಾರೆಂದು ಬೆಂಗಳೂರು ನಗರದ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News