ಬಜ್ಪೆ: ಇಬ್ಬರು ಸಹೋದರಿಯರು ನಾಪತ್ತೆ
ಮಂಗಳೂರು, ಫೆ.8: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಚಾರ್‌ನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಮಾಮು ಬಿ. ಎಂಬವರ ಮೂವರು ಮಕ್ಕಳ ಪೈಕಿ ಇಬ್ಬರು ಸಹೋದರಿಯರಾದ ಮುಬೀನಾ (22) ಮತ್ತು ಬುಶ್ರಾ (21) ಎಂಬವರು ಫೆ.7ರಿಂದ ಕಾಣೆಯಾದ ಬಗ್ಗೆ ದೂರು ದಾಖಲಾಗಿದೆ.
ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಇವರು. ಫೆ.7ರ ರಾತ್ರಿ ಸುಮಾರು 12:30ಕ್ಕೆ ಊಟ ಮಾಡಿ ಮಲಗಿದ್ದರು ಎನ್ನಲಾಗಿದೆ. ಮುಂಜಾವ 2 ಗಂಟೆಗೆ ಮಾಮು ಅವರ ಕಿರಿಯ ಮಗಳು ಎದ್ದು ನೋಡಿದಾಗ ಮುಬೀನಾ ಮತ್ತು ಬುಶ್ರಾ ಕಾಣೆಯಾಗಿರುವುದು ತಿಳಿದು ಬಂತು. ತಕ್ಷಣ ಎಲ್ಲಾ ಕಡೆ ಹುಡುಕಾಡಿದರೂ ಪ್ರಯೋಜನವಾಗದ ಕಾರಣ ದೂರು ನೀಡಲಾಗಿದೆ.
ಮುಬೀನಾ 4.2 ಅಡಿ ಎತ್ತರವಿದ್ದು, ಎಣ್ಣೆ ಕಪ್ಪುಮೈ ಬಣ್ಣ ಹೊಂದಿದ್ದಾರೆ. ಕಾಣೆಯಾದಾಗ ಚೂಡಿದಾರ ಧರಿಸಿದ್ದು (ಬಿಳಿ ಬಣ್ಣದ ಟಾಪ್ ಮತ್ತು ನೀಲಿ ಬಣ್ಣದ ಪ್ಯಾಂಟ್) ಧರಿಸಿದ್ದರು. ಬ್ಯಾರಿ, ಹಿಂದಿ, ಇಂಗ್ಲಿಷ್, ತುಳು, ಕನ್ನಡ ಭಾಷೆ ಮಾತನಾಡುತ್ತಾರೆ.
ಇವರನ್ನು ಯಾರಾದರು ಕಂಡಲ್ಲಿ ಬಜ್ಪೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0824 2220531ನ್ನು ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.