ಉಳ್ಳಾಲ ಉರೂಸ್ ಹಿನ್ನೆಲೆ; ಮಾ.6ರವರೆಗೆ ಬೀಚ್‌ಗಳಲ್ಲಿ ಸಾರ್ವಜನಿಕರಿಗೆ ನಿಷೇಧ
Update: 2022-02-10 22:29 IST
ಮಂಗಳೂರು, ಫೆ.10: ಇತಿಹಾಸ ಪ್ರಸಿದ್ಧ ಉಳ್ಳಾಲ ಉರೂಸ್ ಫೆ.10ರಿಂದ ಆರಂಭಗೊಂಡಿದ್ದು, ಕೋವಿಡ್ ಸೋಂಕು ನಿಯಂತ್ರಿಸುವ ಸಲುವಾಗಿ ಉಳ್ಳಾಲ ಸುತ್ತಮುತ್ತಲಿನ ಬೀಚ್‌ಗಳಲ್ಲಿ ಮಾರ್ಚ್ 6ರವರೆಗೆ ಮುಸ್ಸಂಜೆಯಿಂದ ಮುಂಜಾನೆಯವರೆಗೆ ಸಾರ್ವಜನಿಕರಿಗೆ ನಿಷೇಧ ಹೇರಲಾಗಿದೆ.
ಉಳ್ಳಾಲ, ಉಳಿಯ, ನೆಹರೂ ನಗರ, ಸೋಮೇಶ್ವರ, ಉಚ್ಚಿಲ, ಮೊಗವೀರಪಟ್ಣ, ಪೆರಿಬೈಲ್, ಬಟ್ಟಪ್ಪಾಡಿ ಬೀಚ್‌ಗಳಲ್ಲಿ ಸಾರ್ವಜನಿಕರಿಗೆ ನಿಷೇಧ ಹೇರಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ತಿಳಿಸಿದ್ದಾರೆ.
ಉರೂಸ್ ಸಂದರ್ಭ ಕೋವಿಡ್ ನಿಯಮಾವಳಿಯನ್ನು ಪಾಲಿಸುವಂತೆ ಸಾರ್ವಜನಿಕರಿಗೆ ಹಾಗೂ ಉರೂಸ್ ಕಾರ್ಯಕ್ರಮದ ಆಯೋಜಕರಿಗೆ ಡಿಸಿ ಸೂಚನೆ ನೀಡಿದ್ದಾರೆ.