×
Ad

ಮಂಗಳೂರು: ಸುಲ್ತಾನ್ ಮಳಿಗೆ ಯಲ್ಲಿ ಮದುವೆಯ ವಜ್ರಾಭರಣ, ನೂತನ ಆಭರಣ ಸಂಗ್ರಹ ಮಾರುಕಟ್ಟೆಗೆ ಬಿಡುಗಡೆ

Update: 2022-02-11 19:17 IST

ಮಂಗಳೂರು: ನಗರದ ಕಂಕನಾಡಿಯ ಸುಲ್ತಾನ್ ವಜ್ರ ಮತ್ತು  ಚಿನ್ನಾಭರಣ ಮಳಿಗೆಯಲ್ಲಿಂದು ಏಳು ವಿವಿಧ ವಜ್ರ ಹಾಗೂ ಚಿನ್ನದ ಮದುವೆಯ ಆಭರಣಗಳನ್ನು ಅತಿಥಿಗಳ ಮೂಲಕ ಗ್ರಾಹಕರಿಗೆ ಬಿಡುಗಡೆ ಗೊಳಿಸಲಾಯಿತು.

ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ನವೀನ್ ಡಿಸೋಜ ಸಿಗ್ನೇಚರ್ ಡೈಮಂಡ್ ಕಲೆಕ್ಷನ್ ಬಿಡುಗಡೆಗೊಳಿಸಿ ಮಾತನಾಡುತ್ತಾ, ಸುಲ್ತಾನ್ ಚಿನ್ನ, ವಜ್ರಾಭರಣ ಸಮೂಹ ಸಂಸ್ಥೆ  ಗ್ರಾಹಕರ  ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ. ಸಾಮಾಜಿಕ ಹೊಣೆಗಾರಿಕೆ ಯನ್ನು ನಿರ್ವಹಿಸುತ್ತಿದೆ ಎಂದು ಶುಭ ಹಾರೈಸಿದರು.

ಉದ್ಯಮಿ ಬಿ.ಬಶೀರ್ ರೋಯಲ್ ಪೋಲ್ಕಿ ಡೈಮಂಡ್ ಕಲೆಕ್ಷನ್, ಉದ್ಯಮಿ ಡಿ.ಅಬ್ಬಾಸ್ ಹಾಜಿ ಲೆಗಸಿ ಅನ್ ಕಟ್ ಡೈಮಂಡ್, ಉದ್ಯಮಿ ಕೆ.ಯು. ಮುಹಮ್ಮದ್ ಹಾಜಿ, ಪ್ರೆಶಿಯಸ್ ಜೆಮ್ ಸ್ಟೋನ್ ಬ್ರೈಡಲ್ ಕಲೆಕ್ಷನ್, ಉದ್ಯಮಿ ಮುಹಮ್ಮದ್ ಅಥಾವುಲ್ಲಾ ಜೋಕಟ್ಟೆ ಜವಾಹರತ್ ಪ್ರೀಮಿಯಂ ಆಂಟಿಕ್ಯು ಬ್ರೈಡಲ್ ಕಲೆಕ್ಷನ್, ಉದ್ಯಮಿ ವಿನಿತ್ ವಸಂತ್ ಶೆಟ್ಟಿ ಸಂಸ್ಕೃತಿ ಪ್ರೀಮಿಯಂ ಆಂಟಿಕ್ಯು ರಜಪೂತ್ ಬ್ರೈಡಲ್ ಕಲೆಕ್ಷನ್, ಅನಿವಾಸಿ ಉದ್ಯಮಿ ಸಂಶೀರ್ ಮೆಹರ್ ಕಲೆಕ್ಷನ್ ಆಭರಣ ಗಳ ನೂತನ ಸಂಗ್ರಹವನ್ನು ಗ್ರಾಹಕರ ಮಾರುಕಟ್ಟೆಗೆ ಬಿಡುಗಡೆ ಗೊಳಿಸಿದರು. ಇದೇ ಸಂದರ್ಭದಲ್ಲಿ ರಾಡೋ ವಾಚ್ ಗಳ ಸಂಗ್ರಹವನ್ನು ಸಾಹೆಲ್ ಝಾಹಿರ್ ಬಿಡುಗಡೆ ಗೊಳಿಸಿದರು.

ಈ ಸಂದರ್ಭದಲ್ಲಿ ಸುಲ್ತಾನ್ ಡೈಮಂಡ್ ಮತ್ತು ಚಿನ್ನಾಭರಣ ಮಳಿಗೆಯ ಆಡಳಿತ ನಿರ್ದೇಶಕ ಟಿ.ಎಂ.ಅಬ್ದುಲ್ ರವೂಫ್, ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ರಹೀಮ್, ಜಸರಲ್ ಮ್ಯಾನೇಜರ್ ಉನ್ನಿತ್ತಾನ್, ಮ್ಯಾನೇಜರ್ ಅಬ್ದುಲ್ ಸತ್ತಾರ್, ಸೀನಿಯರ್ ಮ್ಯಾನೇಜರ್ ಕೆ.ಎಸ್.ಮುಸ್ತಾಫ ಕಕ್ಕಿಂಜೆ ಉಪಸ್ಥಿತರಿದ್ದರು. ಸಾಹಿಲ್ ಝಾಹಿರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News