ಒಡಿಶಾ ಮೂಲದ ಕೂಲಿ ಕಾರ್ಮಿಕ ಸಾವು
Update: 2022-02-11 22:27 IST
ಮಂಗಳೂರು : ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಒಡಿಶಾ ರಾಜ್ಯದ ಪಿಂಟು ಸಮರ್ (50) ಅನಾರೋಗ್ಯದಿಂದ ಫೆ. 6 ರಂದು ಲೋವರ್ ಕಾರ್‌ಸ್ಟ್ರೀಟ್‌ನ ಕಟ್ಟಡವೊಂದರ ಬಳಿ ಬಿದ್ದು ಸಾವನ್ನಪ್ಪಿದ್ದಾರೆ.
7 ವರ್ಷಗಳ ಹಿಂದೆ ಒಡಿಶಾದಿಂದ ಮಂಗಳೂರಿಗೆ ಬಂದಿದ್ದ ಅವರು ಮೇಸ್ತ್ರಿ ಕೆಲಸ ಮತ್ತಿತರ ಕೂಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಶರಾಬು ಕುಡಿಯುವ ಚಟ ಇದ್ದು, ಯಾವುದೋ ಕಾಯಿಲೆಯಿಂದ ಮೃತ ಪಟ್ಟಿರ ಬಹುದೆಂದು ಶಂಕಿಸಲಾಗಿದೆ.
ಮೃತರ ವಿಳಾಸ ತಿಳಿದು ಬಂದಿಲ್ಲ. 5 ಅಡಿ 6 ಇಂಚು ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ದೃಢ ಶರೀರ, ಕಪ್ಪು ತಲೆ ಕೂದಲು, ಕಪ್ಪು ಕುರುಚಲು ಗಡ್ಡ,,ಬಿಳಿ ನೀಲಿ ಬಣ್ಣದ ಅರ್ಧ ತೋಳಿನ ಟಿ-ಶರ್ಟ್, ಎದೆಯ ಎಡ ಬದಿಯ ಮೇಲೆ ಲವ್ ಮಾರ್ಕ್ ಒಳಗೆ ಟಿಐಕೆಐ ಎಂದು ಇಂಗ್ಲಿಷ್‌ನಲ್ಲಿ ಹಚ್ಚೆ ಬರೆಯಲಾಗಿದೆ.
ವಾರಸುದಾರರು ಇದ್ದರೆ ಬಂದರು ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.