ಪುತ್ತೂರು: ಸಿ.ಎ. ಪರೀಕ್ಷೆಯಲ್ಲಿ ಫೈರೋಝ್ ತೇರ್ಗಡೆ
Update: 2022-02-12 23:01 IST
ಪುತ್ತೂರು: ಡಿಸೆಂಬರ್ ನಲ್ಲಿ ನಡೆದ ಸಿಎ ಅಂತಿಮ ಪರೀಕ್ಷೆಯಲ್ಲಿ ಪುತ್ತೂರು ತಾಲೂಕಿನ ಕಬಕ ಬಗ್ಗುಮೂಲೆಯ ಮಹಮ್ಮದ್ ಫೈರೋಝ್ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ.
ಬೆಂಗಳೂರಿನ ಅಮೆಝೋನ್ ಮತ್ತು ಮೈಸೂರಿನ ಬಿ.ಎಸ್.ರವಿಕುಮಾರ್ ಅಸೋಸಿಯೇಟ್ಸ್ ನಲ್ಲಿ ತರಬೇತಿ ಪಡೆದಿರುವ ಮಹಮ್ಮದ್ ಫೈರೋಝ್ ಅವರು ಕಬಕ ಬಗ್ಗುಮೂಲೆ ನಿವಾಸಿ ಶರೀಫ್ ಕಾರ್ಜಾಲ್ ಮತ್ತು ಝೊಹರಾ ದಂಪತಿಯ ಪುತ್ರ.