ಇನ್ ಸ್ಪೈರ್ ಅವಾರ್ಡ್: ರಾಜ್ಯಮಟ್ಟಕ್ಕೆ ಕೊಣಾಜೆಯ ಶ್ರಾವ್ಯ ಎನ್. ಭಟ್ ಆಯ್ಕೆ
Update: 2022-02-13 17:46 IST
ಕೊಣಾಜೆ: ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ನಡೆಸುವ ಇನ್ ಸ್ಪೈಯರ್ ಅವಾರ್ಡ್ಸ್-ಎಂಎಎನ್ಎಕೆ (INSPIRE AWARDS -MANAK) 2020-21ನೇ ಸಾಲಿನ ವಿಜ್ಞಾನ ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ಕೊಣಾಜೆಯ ವಿಶ್ವಮಂಗಳ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಶ್ರಾವ್ಯ ಎನ್.ಭಟ್ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಜಿಲ್ಲಾಮಟ್ಟದ ಆನ್ ಲೈನ್ ಸ್ಪರ್ಧೆಯನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಂಗಳೂರು ಇವರು ಆಯೋಜಿಸಿ ಆಯ್ಕೆಯನ್ನು ಮಾಡಿರುತ್ತಾರೆ.ಫೆಬ್ರವರಿ 23 ರಿಂದ 25 ರವರೆಗೆ ನಡೆಯುವ ಆನ್ ಲೈನ್ ಸ್ಪರ್ಧೆಯಲ್ಲಿ ಶಾಲೆಯನ್ನು ಪ್ರತಿನಿಧಿಸಲಿರುವರು. ಇವರು ಪಾದಲ್ಪಾಡಿ ನರಸಿಂಹ ಭಟ್ ಮತ್ತು ಸುಪ್ರೀತ ಎನ್. ಭಟ್ ದಂಪತಿಯ ಪುತ್ರಿ.