×
Ad

ಉಳ್ಳಾಲ: ಬೃಹತ್ ರಕ್ತದಾನ ಶಿಬಿರ

Update: 2022-02-13 23:00 IST

ಉಳ್ಳಾಲ: ಮನುಷ್ಯ ಜೀವದಲ್ಲಿರುವ ರಕ್ತ ಜಾತಿ-ಧರ್ಮಾದಾರಿತವಲ್ಲ. ರಕ್ತದಾನದ ಮೂಲಕ ಅಪಾಯದಲ್ಲಿರುವ ರೋಗಿಯ ಜೀವ ರಕ್ಷಣೆಯಾಗುವುದನ್ನು ನಾವು ನಿತ್ಯ ಕಾಣುತ್ತಿದ್ದೇವೆ. ಆದ್ದರಿಂದ ರಕ್ತದಾನ ಮಾಡುವುದು ಮತ್ತು ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ. ರಕ್ತದಾನ ಮಾನವೀಯತೆಯ ಪ್ರತ್ಯಕ್ಷ ದರ್ಶನವಾಗಿದೆ ಎಂದು ಮಾಜಿ ಮಂಡಲ ಪ್ರಧಾನ ಹಾಗೂ ಮೊಗವೀರ ಸಮಾಜದ ಮುಖಂಡ ಬಾಬು ಬಂಗೇರ ಹೇಳಿದರು.

ಅವರು 21ನೇ ಪಂಚ ವಾರ್ಷಿಕ ಉರೂಸ್ ಮುಬಾರಕ್ ಪ್ರಯುಕ್ತ ದರ್ಗಾ ಸಮಿತಿ ಮತ್ತು ಉರೂಸ್ ಸಮಿತಿ ಉಳ್ಳಾಲ, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಇದರ ಸಂಯುಕ್ತ ಆಶ್ರಯದಲ್ಲಿ ದೇರಳೆಕಟ್ಟೆ ಯೇನಪೋಯ ಆಸ್ಪತ್ರೆ ರಕ್ತ ನಿಧಿ ಮತ್ತು ದೇರಳೆಕಟ್ಟೆ ಕೆ.ಎಸ್ ಹೆಗ್ಡೆರಕ್ತ ನಿಧಿ ಸಹಬಾಗಿತ್ವದಲ್ಲಿ ಉಳ್ಳಾಲದ ಸೈಯ್ಯದ್ ಮದನಿ ಅರಬಿಕ್ ಕಾಲೇಜಿನ ಪ್ರಿನ್ಸಿಪಾಲ್ ಶೈಖುನಾ ಉಸ್ಮಾನ್ ಫೈಝಿಯವ ದುಆದೊಂದಿಗೆ  ಜರುಗಿದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟನಾ ಸಭೆಯಲ್ಲಿ ಮಾತನಾಡುತ್ತಿದ್ದರು.

ಅಬ್ದುಲ್ ರಶೀದ್ ಹಾಜಿ ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷರಾಗಿ ಕಳೆದ ಆರು ವರ್ಷಗಳ ಆಡಳಿತಾವಧಿ ಉಳ್ಳಾಲದ ಅಭಿವೃದ್ಧಿ ಮತ್ತು ಸಾಮರಸ್ಯದ ಬದುಕಿಗೆ ಅರ್ಹ ಕೊಡುಗೆಗಳನ್ನು ನೀಡಿದ್ದಾರೆ. ರಶೀದ್ ರವರ ನೇತೃತ್ವದ ಈ ಬಾರಿಯ ಉರೂಸ್ ಯಶಸ್ವಿಯಾಗಲಿವೆ ಎಂದು ಹಾರೈಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉಳ್ಳಾಲ ಸಯ್ಯದ್ ಮದನಿ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಮಾತನಾಡಿ, ನಾವು ರಕ್ತದಾನ ಮಾಡುವ ಮೂಲಕ ಸಾವಿನ ದವಡೆಯಿಂದ ಮನುಷ್ಯ ಜೀವವನ್ನು ಉಳಿಸಬಹುದು. ಈ ನಿಟ್ಟಿನಲ್ಲಿ ರಕ್ತದಾನ ಶಿಬಿರದ ಮೂಲಕ ಜನರ ಜೀವ ಉಳಿಸುವಂತಹ ಕಾರ್ಯ ಶ್ಲಾಘನೀಯ. ಮುಂದೆಯೂ ಇನ್ನಷ್ಟು ಶಿಬಿರವನ್ನು ಏರ್ಪಡಿಸಲಿ ಎಂದರು.

ಬ್ಲಡ್ ಹೆಲ್ತ್ ಕ್ಯಾರ್ ಸಂಸ್ಥೆಯ ಶಂಶುದ್ದೀನ್ ಬಳ್ಕುಂಜೆ ರಕ್ತದಾನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ  ಮಾಜಿ ಮಂಡಲ ಪಂಚಾಯತ್ ಸದಸ್ಯ ರವೀಂದ್ರ ರಾಜ್ ಮಾತನಾಡಿ, ಉಳ್ಳಾಲ ದರ್ಗಾ ಮತ್ತು ಹಿಂದೂ ‌ಸಮಾಜದ ನಡುವಿನ ಸಂಬಂಧವನ್ನು ವಿವರಿಸಿ, ಭಾವೈಕ್ಯತೆಯಿಂದ ಕೂಡಿ ಬಾಳುವ ಸಮಾಜದ ಉಳಿವಿಗೆ ಹಾಜಿ ಅಬ್ದುಲ್ ರಶೀದ್ ರಂತಹ ನೇತಾರರ ನಾಯಕತ್ವ ಅಗತ್ಯವಿದೆ ಎಂದು ಹೇಳಿದರು.

ಎಸ್.ಡಿ.ಪಿ.ಐ ಮುಖಂಡ ನಿಝಾಂ ಕಾಸಿಂ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಉಳ್ಳಾಲ ದರ್ಗಾ ಮಾದ್ಯಮ ಉಸ್ತುವಾರಿ ಫಾರೂಕ್ ಉಳ್ಳಾಲ್ ಸ್ವಾಗತಿಸಿದರು. ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ದ ಗೌರವ ಸಲಹೆಗಾರ  ಸುಲೈಮಾನ್ ಶೇಖ್ ಬೆಳುವಾಯಿ ಅಧ್ಯಕ್ಷೀಯ ಭಾಷಣಗೈದರು. ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಅಧ್ಯಕ್ಷ ನಝೀರ್ ಹುಸೈನ್ ತಮ್ಮ ಸಂಸ್ಥೆಯ ಸೇವಾ ಚಟುವಟಿಕೆಯ ಸ್ಥೂಲ ಪರಿಚಯವನ್ನು ಸಭೆಯ ಮುಂದಿಟ್ಟರು.

ಉಳ್ಳಾಲ ನಗರ ಸಭೆಯ ಕೌನ್ಸಿಲರ್ ಅಬ್ದುಲ್ ಜಬ್ಬಾರ್, ಮಂಡಲ ಪಂಚಾಯತ್ ಮಾಜಿ ಸದಸ್ಯ ಜಮಾಲ್ ಬಾರ್ಲಿ, ಸಯ್ಯದ್ ಮದನಿ ಅರಬಿಕ್ ಟ್ರಸ್ಟ್ ಉಪಾಧ್ಯಕ್ಷ ಅಬೂಬಕರ್, ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಎ.ಕೆ.ಮೊಯಿದಿನ್, ಅರಬಿಕ್ ಟ್ರಸ್ಟ್ ಕಾರ್ಯದರ್ಶಿ ಆಶೀಫ್ ಅಬ್ದುಲ್ಲ,  ಉಳ್ಳಾಲ ನಗರ ಸಭಾ ಸದಸ್ಯ ಅಬ್ದುಲ್ ಜಬ್ಬಾರ್,  ಯೇನಪೋಯ ಆಸ್ಪತ್ರೆಯ ಅರ್ಫಾಝ್ ನವಾಝ್, ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಮರಿಯ, ಉಳ್ಳಾಲ ದರ್ಗಾ ಸದಸ್ಯ ಅಲಿಮೋನು, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಇದರ ಜೆರ್ಸಿ ಅನಾವರಣವನ್ನು ಉಳ್ಳಾಲ ಸಯ್ಯದ್ ಮದನಿ ದರ್ಗಾದ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ನೆರವೇರಿಸಿದರು.

ಅಬ್ದುಲ್ ಹಮೀದ್ ಗೋಳ್ತಮಜಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News