×
Ad

ಮಂಗಳೂರು: ವ್ಯಕ್ತಿಗೆ ಆನ್‌ಲೈನ್ ವಂಚನೆ

Update: 2022-02-16 22:05 IST

ಮಂಗಳೂರು, ಫೆ.16: ವೆಬ್‌ಸೈಟ್‌ನಲ್ಲಿ ಉದ್ಯೋಗಕ್ಕೆ ಅರ್ಜಿ ಹಾಕಿದ ವ್ಯಕ್ತಿಯ 1.61 ಲ.ರೂ. ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ದೂರು ದಾಖಲಾಗಿದೆ.

ನಗರದ ವ್ಯಕ್ತಿಯೊಬ್ಬರು ವೆಬ್‌ಸೈಟ್‌ವೊಂದರಲ್ಲಿ ನೌಕರಿಗೆ ಸಂಬಂಧಿಸಿ ನಿರಂತರವಾಗಿ ವೈಯಕ್ತಿಕ ವಿವರಗಳನ್ನು ಹಾಕುತ್ತಿದ್ದರು. ಜ.14ರಂದು ಅವರಿಗೆ ಗೌರವ್ ಎಂಬ ವ್ಯಕ್ತಿ 9911566528ರಿಂದ ಕರೆ ಮಾಡಿ ವೆಬ್‌ಸೈಟ್‌ವೊಂದನ್ನು ತಿಳಿಸಿ ಮಾಹಿತಿ ನೀಡಿ ನೋಂದಾಯಿಸಿಕೊಳ್ಳುವಂತೆ ಸೂಚಿಸಿದ. ಅದರಂತೆ ವ್ಯಕ್ತಿಯು 4,130 ರೂ.ಗಳನ್ನು ಪಾವತಿಸಿ ನೋಂದಾಯಿಸಿಕೊಂಡಿದ್ದರು. ಅನಂತರ ದಾಖಲಾತಿ ಪರಿಶೀಲನೆಗಾಗಿ 13,227 ರೂ., ಸಂದರ್ಶನಕ್ಕಾಗಿ 20,886 ರೂ., ಪೊಲೀಸ್ ಪರಿಶೀಲನೆಗಾಗಿ 18,101 ರೂ., ಸಂಬಳ ಪರಿಶೀಲನೆಗಾಗಿ 25,063 ರೂ. ಪಾವತಿಸಬೇಕು. ಪಾವತಿಸಿದ ಹಣ ಮರುಪಾವತಿ ಆಗುತ್ತದೆ ಎಂದು ವೆಬ್‌ಸೈಟ್‌ನ ವ್ಯಕ್ತಿ ತಿಳಿಸಿದ್ದ ಎನ್ನಲಾಗಿದೆ. ಬಳಿಕ ಆಫರ್ ಲೆಟರ್ ನೀಡುವುದಕ್ಕೆ 32,500 ರೂ. ಹಣ ಪಾವತಿಸುವಂತೆ ಹೇಳಿದ. ಹೀಗೆ ಅರ್ಜಿದಾರ ವ್ಯಕ್ತಿಯು ಜ.14ರಿಂದ 17ರವರೆಗೆ ತನ್ನ ಎಚ್‌ಡಿಎಫ್‌ಸಿ ಖಾತೆ, ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ ಮುಖಾಂತರ ಹಂತ ಹಂತವಾಗಿ ಒಟ್ಟು 1,78,933 ರೂ. ಹಣವನ್ನು ಯುಪಿಐ ಮುಖಾಂತರ ವರ್ಗಾವಣೆ ಮಾಡಿದ್ದರು. ಅನಂತರ ವೆಬ್‌ಸೈಟ್‌ನವರು ಫೆ.2ರಂದು ಅರ್ಜಿದಾರರ ಎಚ್‌ಡಿಎಫ್‌ಸಿ ಖಾತೆಗೆ 17,430 ರೂ. ಮರುಪಾವತಿಸಿದರು. ಆದರೆ ಉಳಿದ 1,61,503 ರೂ. ಮರುಪವಾತಿಸಿಲ್ಲ. ಆರೋಪಿಗಳಾದ ಗೌರವ್ ಮತ್ತು ಅಶ್ವಿನ್ ಎಂಬುವವರು ಉದ್ಯೋಗ ಕೊಡಿಸುವುದಾಗಿ ವಂಚಿಸಿದ್ದಾರೆ ಎಂದು ಸೆನ್ ಅಪರಾಧ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News