×
Ad

ಶೈಕ್ಷಣಿಕ - ಸಾಮಾಜಿಕ ಸಾಧಕರೊಂದಿಗೆ ಒಂದು ಸಂಜೆ ಕಾರ್ಯಕ್ರಮ

Update: 2022-02-20 13:51 IST

ಬಂಟ್ವಾಳ. ಫೆ.20: ಸಮಾಜದಲ್ಲಿ ಅಪೂರ್ವ ಸಾಧನೆ ಮಾಡಿದ ಸಾಧಕರನ್ನು ಸಮಾಜಕ್ಕೆ ಪರಿಚಯಿಸಿ ಅವರ ಸಾಧನೆಯನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುವುದರಿಂದ ಸಾಧಕರಿಗೆ ಮಾತ್ರವಲ್ಲ ಇತರರಿಗೂ ಪ್ರೇರಣೆಯಾಗಲಿದೆ ಎಂದು ನೋಟರಿ ವಕೀಲ ಹಾಗೂ ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕಾರ್ಯದರ್ಶಿ ಅಬೂಬಕರ್ ವಿಟ್ಲ  ಅಭಿಪ್ರಾಯಪಟ್ಟರು.

ಅವರು  ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿಯವರ ಗೋಳ್ತಮಜಲು ನಿವಾಸದಲ್ಲಿ ನಡೆದ 'ಶೈಕ್ಷಣಿಕ - ಸಾಮಾಜಿಕ ಕ್ಷೇತ್ರದ ಸಾಧಕರೊಂದಿಗೆ ಒಂದು ಸಂಜೆ'  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ವೆಲ್ಲೂರಿನ ಅರಬಿಕ್ ವಿದ್ಯಾ ಸಂಸ್ಥೆ ಬಾಖಿಯಾತ್ ಸ್ವಾಲಿಯಾತ್ ನಿಂದ ಬಾಖವಿ ಪದವಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಕಾಂ.ಸ್ನಾತಕೋತ್ತರ ಪದವಿ ಪಡೆದಿರುವ ಮುದರ್ರಿಸ್ ಉಸ್ಮಾನ್ ರಾಝಿಕ್ ಬಾಖವಿ, ಎನ್ ಐಟಿಕೆ ಸುರತ್ಕಲ್ ನಲ್ಲಿ ಬಿ.ಟೆಕ್ ಪದವಿ ಪಡೆದು ಪ್ರಸಕ್ತ ಕೇಂದ್ರ ಸರಕಾರಿ ಸ್ವಾಮ್ಯದ ರಕ್ಷಣಾ ಇಲಾಖಾ ಅಧೀನದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ‌ಬೆಂಗಳೂರಿನಲ್ಲಿ ಡೆಪ್ಯುಟಿ ಇಂಜಿನಿಯರ್ ಹುದ್ದೆಗೆ ನೇಮಕಾತಿ ಹೊಂದಿರುವ ಮುಹಮ್ಮದ್ ಇಮ್ರಾನ್ ಸಜಿಪ, ಅಪೂರ್ವ ಪ್ರಾಚೀನ ವಸ್ತುಗಳ ಸಂಗ್ರಹಾಲಯ ಕಲ್ಲಡ್ಕ ಮ್ಯೂಸಿಯಂನ ಸಂಸ್ಥಾಪಕ ಮುಹಮ್ಮದ್ ಯಾಸೀರ್ ಕಲ್ಲಡ್ಕ ಇವರನ್ನು ಸನ್ಮಾನಿಸಲಾಯಿತು.

ಪಟ್ಟೆಕೋಡಿ ನಾಗರಿಕ ಸಮಿತಿಯ ಸಂಚಾಲಕ ಡಿ.ಕೆ.ಇಬ್ರಾಹೀಂ, ಹಿದಾಯ ಫೌಂಡೇಶನ್ ಉಪಾಧ್ಯಕ್ಷ ಆಸಿಫ್ ಇಕ್ಬಾಲ್, ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ಕಾರ್ಯದರ್ಶಿ ಎಂ.ಎಚ್.ಇಕ್ಬಾಲ್ ಸಾಧಕರನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್  ಹಿರಿಯ ತರಬೇತುದಾರ ಮುಹಮ್ಮದ್ ತುಂಬೆ, ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶೇಕ್ ಆದಂ ಸಾಹೇಬ್ ನೆಲ್ಯಾಡಿ, ಎಂ. ಫ್ರೆಂಡ್ಸ್ ಟ್ರಸ್ಟಿ ರಶೀದ್ ವಿಟ್ಲ, ಉಪನ್ಯಾಸಕರಾದ ಸಮೀವುಲ್ಲಾ ವಗ್ಗ, ಮುಹಮ್ಮದ್ ಮುಸ್ತಫ, ಮುಹಮ್ಮದ್ ಮನಾಝಿರ್ ಮುಡಿಪು, ಹಾರಿಸ್ ಬಾಂಬಿಲ, ಮುಹಮ್ಮದ್ ಶಾಹಿದ್ ಬಲ್ಮಠ, ಬಂಟ್ವಾಳ ತಾಲೂಕು ಜಮೀಯ್ಯತುಲ್ ಫಲಾಹ್ ಪೂರ್ವಾಧ್ಯಕ್ಷ ಸುಲೈಮಾನ್ ಸೂರಿಕುಮೇರು, ಮುಹಮ್ಮದ್ ಪಾಣೆಮಂಗಳೂರು, ಪರ್ಲಿಯಾ ಎಜುಕೇಶನ್ ಟ್ರಸ್ಟಿನ ಇಬ್ರಾಹೀಂ ಪರ್ಲಿಯಾ, ಸಾಮಾಜಿಕ ಕಾರ್ಯಕರ್ತರಾದ  ಅಬ್ದುಲ್ ಹಕೀಂ ಕಲಾಯಿ, ಶಾಕಿರ್ ಅಳಕೆ‌ಮಜಲು, ಬದ್ರುದ್ದೀನ್ ಮರಕ್ಕಿಣಿ, ಆಶಿಕ್ ಕುಕ್ಕಾಜೆ , ಕೆಎಸ್ಸಾರ್ಟಿಸಿ ನಿವೃತ್ತ ನೌಕರ ಮುಹಮ್ಮದ್ ಕಲ್ಲಡ್ಕ‌, ಸ್ಥಳೀಯರಾದ ಎನ್.ಎಚ್.ಅಬ್ಬಾಸ್, ಸುಲೈಮಾನ್ ಟಿ., ನಿಹಾನ್ ಮುಹಮದ್, ಹಮೀದ್ ಅಲಿ, ರಫೀಕ್ ನೆಟ್ಲ,  ಅಶ್ರಫ್ ಪಟ್ಟೆಕೋಡಿ, ಫಾರೂಕ್ ಪಟ್ಟೆಕೋಡಿ ಅತಿಥಿಗಳಾಗಿ ಭಾಗವಹಿಸಿದ್ದರು.

ಮಾಸ್ಟರ್ ಮುಹಮ್ಮದ್ ರಿಶಾನ್ ಕಿರಾಅತ್ ಪಠಿಸಿದರು. ಅಬ್ದುಲ್ ರಝಾಕ್ ಅನಂತಾಡಿ ಪ್ರಾಸ್ತಾವಿಕ‌ ಮಾತುಗಳೊಂದಿಗೆ ಸ್ವಾಗತಿಸಿದರು. ರಶೀದ್ ವಿಟ್ಲ ವಂದಿಸಿದರು.‌ ಉಪನ್ಯಾಸಕ ಅಬ್ದುಲ್ ‌ಮಜೀದ್ ಎಸ್. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News