ರಾಜ್ಯಪಾಲರನ್ನು ವಾಪಾಸು ಕಳುಹಿಸುವ ಅಧಿಕಾರ ರಾಜ್ಯಗಳಿಗೆ ನೀಡಿ: ಕೇರಳ ಮನವಿ

Update: 2022-02-21 02:37 GMT
ಕೇರಳ ರಾಜ್ಯಪಾಲ ಆರೀಫ್ ಮುಹಮ್ಮದ್ ಖಾನ್ (PTI)

ತಿರುವನಂತಪುರ: ರಾಜ್ಯಪಾಲ ಆರೀಫ್ ಮುಹಮ್ಮದ್ ಖಾನ್ ಮತ್ತು ಕೇರಳ ಸರ್ಕಾರದ ನಡುವಿನ ಸಂಘರ್ಷ ಮುಂದುವರಿದಿರುವ ನಡುವೆಯೇ, ರಾಜ್ಯಪಾಲರನ್ನು ವಾಪಾಸು ಕಳುಹಿಸುವ ಅಧಿಕಾರವನ್ನು ರಾಜ್ಯ ವಿಧಾನಸಭೆಗಳಿಗೆ ನೀಡಬೇಕು ಎಂಬ ಪ್ರಸ್ತಾವವನ್ನು ಕೇರಳ ಸರ್ಕಾರ ಕೇಂದ್ರಕ್ಕೆ ಕಳುಹಿಸಿದೆ.

"ರಾಜ್ಯಪಾಲರನ್ನು ವಾಪಾಸು ಕಳುಹಿಸುವ ವಿಚಾರದಲ್ಲಿ ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡುವ ಸಂಬಂಧ ಸಂವಿಧಾನದ 156ನೇ ವಿಧಿಗೆ ತಿದ್ದುಪಡಿ ತರುವ ಅಗತ್ಯವಿದೆ" ಎಂದು ಕೇಂದ್ರ- ರಾಜ್ಯ ಸಂಬಂಧಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಸಲಹೆ ನೀಡಲು ಕೇಂದ್ರ ಸರ್ಕಾರ ನೇಮಕ ಮಾಡಿರುವ ನಿವೃತ್ತ ನ್ಯಾಯಮೂರ್ತಿ ಮದನ್ ಮೋಹನ್ ಪುಂಚಿ ಅವರ ಪ್ರತಿಕ್ರಿಯೆಗೆ ಪ್ರತಿಯಾಗಿ ಸರ್ಕಾರ ಈ ಹೇಳಿಕೆ ನೀಡಿದೆ.

ಸಂವಿಧಾನ ಉಲ್ಲಂಘನೆ, ಕುಲಾಧಿಪತಿಯಾಗಿ ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ಲೋಕ ಅಥವಾ ಅಪರಾಧ ವಿಚಾರಣೆ ಪ್ರಕ್ರಿಯೆ ವಿಚಾರಗಳಲ್ಲಿ ರಾಜ್ಯಪಾಲರನ್ನು ಕಿತ್ತುಹಾಕುವ ಅಧಿಕಾರವನ್ನು ರಾಜ್ಯ ವಿಧಾನಮಂಡಲಕ್ಕೆ ನೀಡಬೇಕು ಎಂದು ರಾಜ್ಯ ಸರ್ಕಾರ ಆಗ್ರಹಿಸಿದೆ.

"ರಾಜ್ಯಪಾಲರಿಗೆ ಸಂಬಂಧಿಸಿದಂತೆ ಸಂವಿಧಾನಾತ್ಮಕ ಕಾರ್ಯಗಳ ಜತೆಗೆ ಅವರಿಗೆ ವಿಶ್ವವಿದ್ಯಾನಿಲಯದ ಕುಲಾಧಿಪತಿಯಂಥ ಶಾಸನಬದ್ಧ ಕಾರ್ಯಗಳ ಹೊಣೆಯನ್ನೂ ವಹಿಸಲಾಗಿದೆ. ಆದ್ದರಿಂದ ಸಂವಿಧಾನದ ಉಲ್ಲಂಘನೆ ಅಥವಾ ತಮ್ಮ ಕಾರ್ಯಗಳನ್ನು ನಿಭಾಯಿಸುವಲ್ಲಿ ವೈಫಲ್ಯದಂಥ ಅಂಶಗಳನ್ನು 156ನೇ ವಿಧಿಯಲ್ಲಿ ಸೇರಿಸಬೇಕು" ಎಂದು ಕೇರಳ ರಾಜ್ಯದ ಅಂತಿಮ ಅಭಿಪ್ರಾಯಗಳು ಎಂಬ ಶೀರ್ಷಿಕೆಯ ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ. ಇದನ್ನು ರಾಜ್ಯ ಸಚಿವ ಸಂಪುಟ ಅನುಮೋದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News