×
Ad

ಕಾಜೂರ್ ಉರೂಸ್ ಪ್ರಯುಕ್ತ ಆರೋಗ್ಯ ಮೇಳ

Update: 2022-02-26 15:35 IST

ಬೆಳ್ತಂಗಡಿ, ಫೆ.26: ಕಾಜೂರು ಮಖಾಂ ಶರೀಫ್ ಉರೂಸ್ ಪ್ರಯುಕ್ತ ಆರೋಗ್ಯ ಮೇಳ ಹಾಗೂ ಉಚಿತ ಔಷಧಿ ವಿತರಣೆ ಕಾರ್ಯಕ್ರಮ ಫೆ.26ರಂದು ರಹ್ಮಾನಿಯಾ ಸಮುದಾಯ ಭವನದಲ್ಲಿ ನಡೆಯಿತು.

ಸಮಾರಂಭವನ್ನು ಕಾಜೂರು ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯ, ಹಾಗೂ ಪ್ರಧಾನ ಧರ್ಮಗುರು ಸೈಯದ್ ಕಾಜೂರು ತಂಙಳ್ ಉದ್ಘಾಟಿಸಿದರು. ಕಾಜೂರು ಉರೂಸ್ ಸಮಿತಿಯ ಅಧ್ಯಕ್ಷ ಕೆ.ಯು.ಇಬ್ರಾಹೀಂ ಅಧ್ಯಕ್ಷತೆ ವಹಿಸಿದ್ದರು.

ಪದ್ಮಶ್ರೀ ಪ್ರಶಸ್ತಿ ಹರೇಕಳ ಹಾಜಬ್ಬ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು.

ಉರೂಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಜೆ.ಎಚ್ ಅಬೂಬಕರ್ ಸಿ‌ದ್ದೀಕ್ ಕಾಜೂರು, ಕೋಶಾಧಿಕಾರಿ ಕೆ.ಎಂ.ಕಮಾಲ್,  ಉಪಾಧ್ಯಕ್ಷ ಹಾಜಿ ಬಿ.ಎಚ್.ಅಬೂಬಕರ್, ಜೊತೆ ಕಾರ್ಯದರ್ಶಿ ಅಶ್ರಫ್ ಕಿಲ್ಲೂರು, ಮುದರ್ರಿಸ್ ಅಬ್ದುಲ್ ಖಾದರ್ ಸ‌ಅದಿ,‌  ಕಾಜೂರು ಆಡಳಿತ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಕೆ.ಶೇಕಬ್ಬ ಕುಕ್ಕಾವು, ಇಬ್ರಾಹೀಂ ಮದನಿ, ಮುಹಮ್ಮದ್ ಸಖಾಫಿ,‌ ಯೆನೆಪೊಯ ಆಸ್ಪತ್ರೆಯ ಪಿಆರ್‍ಒ ಅಬ್ದುರ್ರಝಾಕ್, ದಂತ ವೈದ್ಯಕೀಯ ವಿಭಾಗದ ಭರತ್ ಹಾಗೂ ವೈದ್ಯರು  ಉಪಸ್ಥಿತರಿದ್ದರು.

ಪತ್ರಕರ್ತ ಅಶ್ರಫ್ ಆಲಿಕುಂಞಿ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಧರ್ಮಗುರು ರಶೀದ್ ಮದನಿ ವಂದಿಸಿದರು‌. ದಿಡುಪೆ ಯಂಗ್‌ಮೆನ್ಸ್ ಕಮಿಟಿ ಸದಸ್ಯರು ಸಹಕರಿಸಿದರು.

ಆರೋಗ್ಯ ಮೇಳದಲ್ಲಿ ದೇರಳಕಟ್ಟೆ ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ 13 ತಜ್ಞ ವೈದ್ಯರ ತಂಡ ಭಾಗವಹಿಸಿದ್ದು, ಐನೂರಕ್ಕೂ ಅಧಿಕ ಮೇಳದ ಪ್ರಯೋಜನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News