ಉಳ್ಳಾಲ ಉರೂಸ್ ಪ್ರಯುಕ್ತ ಕಾರ್ಯಕ್ರಮ
Update: 2022-02-27 22:55 IST
ಮಂಗಳೂರು : ಉಳ್ಳಾಲ ಉರೂಸ್ ಪ್ರಯುಕ್ತ ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೈಯ್ಯದ್ ಅಲವಿ ಮದನಿ ತಂಙಳ್ ಹೊನ್ನಾವರ ದುಆ ಆಶೀರ್ವಚನ ನೀಡಲಿದ್ದಾರೆ.
ಅಶ್ರಫ್ ಫೈಝಿ, ಮತ ಪ್ರವಚನ ನೀಡಲಿದ್ದಾರೆ. ಖಲೀಲ್ ಹುದವಿ, ಕಾಸರಗೋಡು ಮುಖ್ಯ ಭಾಷಣಕಾರರಾಗಿ ಮಾತನಾಡಲಿದ್ದಾರೆ. ಅಶ್ರಫ್ ಫೈಝಿ ಕೊಡಗು, ಅಬ್ದುಲ್ ಅಝೀಝ್ ಫೈಝಿ ಪಟ್ಟೋರಿ, ಕೆ.ಎಂ.ಶರೀಫ್ ದಾರಿಮಿ ಉದ್ದಬೆಟ್ಟು ಸಹಿತ ಹಲವು ಧಾರ್ಮಿಕ ಮತ್ತು ಸಾಮಾಜಿಕ ನಾಯಕರು ಭಾಗವಹಿಸಲಿದ್ದಾರೆ ಎಂದು ಉಳ್ಳಾಲ ದರ್ಗಾ ಮಾಧ್ಯಮ ಉಸ್ತುವಾರಿ ಫಾರೂಕ್ ಉಳ್ಳಾಲ್ ತಿಳಿಸಿದ್ದಾರೆ.