1.4 ಬಿಲಿಯನ್‌ ಸುಸಂಸ್ಕೃತ ನಾಗರಿಕರ ಪ್ರಧಾನಿ ʼರಾಜಕೀಯ ಹಿಜ್ಡಾʼ ಆಗಲು ಸಾಧ್ಯವಿಲ್ಲ: ಸುಬ್ರಮಣಿಯನ್‌ ಸ್ವಾಮಿ ವಾಗ್ದಾಳಿ

Update: 2022-03-01 11:25 GMT

ಹೊಸದಿಲ್ಲಿ: ರಷ್ಯಾ ಮತ್ತು ಉಕ್ರೇನ್‌ ನಡುವೆ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಬಿಜೆಪಿ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸಂಸದ ಸುಬ್ರಮಣಿಯನ್‌ ಸ್ವಾಮಿ ಟ್ವೀಟ್‌ ಮಾಡಿದ್ದು, ಈ ಟ್ವೀಟ್‌ ಗೆ ಪ್ರತಿಕ್ರಿಯೆ ನೀಡುತ್ತಾ ಪ್ರಧಾನಿ ನರೇಂದ್ರ ಮೋದಿಯನ್ನು  ಪರೋಕ್ಷವಾಗಿ ಕುಟುಕಿದ್ದಾರೆ . " 1.4 ಬಿಲಿಯನ್‌ ಸುಸಂಸ್ಕೃತ ನಾಗರಿಕರ ಪ್ರಧಾನಮಂತ್ರಿ ʼರಾಜಕೀಯ ಹಿಜಡಾʼ ಆಗಲು ಸಾಧ್ಯವಿಲ್ಲ " ಎಂದು ಅವರು ಹೇಳಿದ್ದಾರೆ.

"ಉಕ್ರೇನ್‌ನಲ್ಲಿ ರಷ್ಯಾ ಮಾಡಿರುವುದು ಕಳೆದ ವರ್ಷದ ದಿಲ್ಲಿ ಬ್ರಿಕ್ಸ್ ನಿರ್ಣಯವನ್ನು ಉಲ್ಲಂಘಿಸಿದೆ ಎಂಬುದು ಈಗ ಸ್ಪಷ್ಟವಾಗಿದೆ. ಪುಟಿನ್‌ಗೆ ಇದರಿಂದ ಹಿಂದೆ ಸರಿಯುವಂತೆ ಹೇಳುವ ಧೈರ್ಯ ಮೋದಿಗೆ ಇದೆಯೇ?" ಎಂದು ಅವರು ಟ್ವೀಟ್‌ ಮಾಡಿದ್ದರು. ಈ ಟ್ವೀಟ್‌ ಗೆ ವ್ಯಕ್ತಿಯೊಬ್ಬರು "ಇಲ್ಲ, ಅವರು ಈಗ ಬಂಡೆ ಮತ್ತು ಕಷ್ಟದ ಜಾಗವೊಂದರ ನಡುವೆ ಸಿಕ್ಕಿಹಾಕಿಕೊಂಡಿದ್ದಾರೆ. ಸದ್ಯಕ್ಕೆ ಸುಮ್ಮನಿರುವುದೇ ಅವರಿಗೆ ಉತ್ತಮ" ಎಂದು ಪ್ರತಿಕ್ರಿಯೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸುಬ್ರಮಣಿಯನ್‌ ಸ್ವಾಮಿ "1.4 ಬಿಲಿಯನ್‌ ಸುಸಂಸ್ಕೃತ ನಾಗರಿಕರ ಪ್ರಧಾನಮಂತ್ರಿ ʼರಾಜಕೀಯ ಹಿಜಡಾʼ ಆಗಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

ಬಿಜೆಪಿ ಕಾರ್ಯಕರ್ತರು ಹಾಗೂ ಪ್ರಧಾನಿ ಮೋದಿ ಅಭಿಮಾನಿಗಳು ಈ ಹೇಳಿಕೆಯ ವಿರುದ್ಧ ತಮ್ಮದೇ ಪಕ್ಷದ ಹಿರಿಯ ನಾಯಕನ ವಿರುದ್ಧ ಕಾಮೆಂಟ್‌ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News