ಮಾ.3ರಂದು ಕುಂಟಲ್ಗುಡ್ಡೆಯಲ್ಲಿ ಏಕದಿನ ಧಾರ್ಮಿಕ ಮತ ಪ್ರಭಾಷಣ
Update: 2022-03-01 19:21 IST
ಬಂಟ್ವಾಳ, ಮಾ.1: ತಾಲೂಕಿನ ಸಜೀಪನಡು ಕುಂಟಲ್ಗುಡ್ಡೆ ಮಸ್ಜಿದುಲ್ ಹುದಾ ಮಸೀದಿ ಹಾಗೂ ಕಾರುಣ್ಯ ಯಂಗ್‌ಮೆನ್ಸ್ ಅಸೋಸಿಯೇಶನ್ ಇದರ ಆಶ್ರಯದಲ್ಲಿ ಮಜ್ಲಿಸುನ್ನೂರ್ ಮತ್ತು ಸ್ವಲಾತ್ ವಾರ್ಷಿಕದ ಅಂಗವಾಗಿ ಏಕದಿನ ಧಾರ್ಮಿಕ ಮತ ಪ್ರಭಾಷಣ ಮಾ. 3ರಂದು ಸಂಜೆ 7 ಗಂಟೆಗೆ ಮಸೀದಿಯ ವಠಾರದಲ್ಲಿ ನಡೆಯಲಿದೆ.
ಸಮಸ್ತ ಕೇಂದ್ರ ಮುಶಾವರದ ಸದಸ್ಯ ಅಲ್‌ಹಾಜಿ ಬಿ.ಕೆ.ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದು, ಸೈಯದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ ದುಅ ನೆರವೇರಿಸಲಿದ್ದಾರೆ. ನೆಬಿ ದಿವಾನ ಅರ್ಶ ಕುಂತೂರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಜೀಪನಡು ಕೇಂದ್ರ ಜುಮಾ ಮಸೀದಿ ಖತೀಬ್ ಅಬುಸ್ವಾಲಿಹ್ ಫೈಝಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಬಿ.ಕೆ.ಅಶ್ರಫ್ ಮುಸ್ಲಿಯಾರ್, ಹನೀಫಾಕ, ಹಂಝ ದಾರಿಮಿ, ರಝಾಕ್ ಹಾಜಿ, ಎಸ್.ಕೆ.ಮುಹಮ್ಮದ್ ಸಹಿತ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.