ಯಂಗ್‌ಮೆನ್ಸ್ ಕುದ್ರೋಳಿ ವತಿಯಿಂದ ಸಾಮೂಹಿಕ ಸುನ್ನತ್ ಕಾರ್ಯಕ್ರಮ
ಮಂಗಳೂರು, ಮಾ.1: ಯಂಗ್‌ಮೆನ್ಸ್ ಕುದ್ರೋಳಿ ಇದರ ವತಿಯಿಂದ ಕುದ್ರೋಳಿಯ ಮುಹಿಯ್ಯುದ್ದೀನ್ ನಗರ ಮೈದಾನದಲ್ಲಿ ಹಲವು ಮಕ್ಕಳಿಗೆ ಸಾಮೂಹಿಕ ಸುನ್ನತ್ ಕಾರ್ಯಕ್ರಮ ನಡೆಯಿತು.
ಮುಹಿಯ್ಯುದ್ದೀನ್ ಜುಮಾ ಮಸೀದಿಯ ಖತೀಬ್ ಮುಹಮ್ಮದ್ ಬಾಖವಿ ದುಆಗೈದರು. ಡಾ.ಝಾಹಿದ್ ಹುಸೈನ್ ಕಾರ್ಯಕ್ರಮ ಉದ್ಘಾಟಿಸಿದರು. ಯಂಗ್‌ಮೆನ್ಸ್ ಕುದ್ರೋಳಿ ಇದರ ಅಧ್ಯಕ್ಷ ಅಬ್ದುಲ್ ಅಝೀಝ್ ಎಎಟಿ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಕಾರ್ಪೊರೇಟರ್ ಶಂಸುದ್ದೀನ್ ಎಚ್‌ಬಿಟಿ, ಮಾಜಿ ಕಾರ್ಪೊರೇಟರ್ ಬಿ. ಅಬೂಬಕ್ಕರ್, ಯಂಗ್‌ಮೆನ್ಸ್ ಕುದ್ರೋಳಿ ಇದರ ಉಪಾಧ್ಯಕ್ಷ ಇಮ್ತಿಯಾಝ್ ಕುದ್ರೋಳಿ, ಕುದ್ರೋಳಿ ಯಂಗ್ ಬಾಯ್ಸ್ ಇದರ ಅಧ್ಯಕ್ಷ ಇಖ್ವಾನ್ ಕುದ್ರೋಳಿ, ಕೇರ್ ದಿ ಹೆಲ್ಪಿಂಗ್ ಹ್ಯಾಂಡ್ಸ್ ಇದರ ಅಧ್ಯಕ್ಷ ಮುಝೈರ್ ಕುದ್ರೋಳಿ, ಹಮ್ಮಬ್ಬ ಮೋನು ಉಪಸ್ಥಿತರಿದ್ದರು.
ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಔಷಧದ ಕಿಟ್, ಹಣ್ಣು ಹಂಪಲು, ವಸ್ತ್ರಗಳನ್ನು ವಿತರಿಸಲಾಯಿತು. ಅತಿಥಿಗಳಾಗಿ ಮುಸ್ಲಿಂ ಐಕ್ಯತಾ ವೇದಿಕೆ ಕುದ್ರೋಳಿ ಇದರ ಅಧ್ಯಕ್ಷ ಯಾಸೀನ್ ಕುದ್ರೋಳಿ, ಜಾಮಿಯಾ ಮಸೀದಿಯ ಕೋಶಾಧಿಕಾರಿ ಮಕ್ಬೂಲ್ ಅಹ್ಮದ್, ಮಾಜಿ ಕಾರ್ಪೊರೇಟರ್ ಅಬ್ದುಲ್ ಅಝೀಝ್, ಮಸೀದಿಯ ಅಧ್ಯಕ್ಷ ಪಿಪಿಎ ಅಬ್ದುಲ್ ಅಝೀಝ್, ಕಾರ್ಪೊರೇಟರ್ ಝೀನತ್ ಶಂಸುದ್ದೀನ್ ಮತ್ತಿತರರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಯಂಗ್‌ಮೆನ್ಸ್ನ ಸಲಹಾ ಸಮಿತಿಯ ಸದಸ್ಯರಾದ ಹಫೀಝ್ ಅರೇಬಿಯನ್, ಹನೀಫ್ ಕುದ್ರೋಳಿ, ಇಮ್ರಾನ್ ಕುದ್ರೋಳಿ ಉಪಸ್ಥಿತರಿದ್ದರು.
ಇಶಾನ್ ಕಿರಾಅತ್ ಪಠಿಸಿದರು. ವಸೀಮ್ ಅಕ್ರಮ್ ಪ್ರಾಸ್ತಾವಿಕ ಭಾಷಣಗೈದರು. ಕಬೀರ್ ಕುದ್ರೋಳಿ ಕಾರ್ಯಕ್ರಮ ನಿರೂಪಿಸಿದರು.