ಕಾರ್ಕಳ : 2ನೇ ಹೆಚ್ಚುವರಿ ಜಿಲ್ಲಾ, ಸತ್ರ ನ್ಯಾಯಧೀಶರ ಸಂಚಾರಿ ಪೀಠ ಉದ್ಘಾಟನೆ
Update: 2022-03-01 22:54 IST
ಕಾರ್ಕಳ ; ಕಾರ್ಕಳ ನ್ಯಾಯಾಲಯಗಳ ಸಂಕೀರ್ಣದಲ್ಲಿ ನೂತನವಾಗಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರ ಸಂಚಾರಿ ಪೀಠವು ಸೋಮವಾರ ಮತ್ತು ಮಂಗಳವಾರ ಕಾರ್ಯ ನಿರ್ವಾಹಿಸಲಿದ್ದು, ನೂತನ ಜಿಲ್ಲಾ ನ್ಯಾಯಾಧೀಶರಾದ ದಿನೇಶ ಹೆಗ್ಡೆ, ಕಾರ್ಕಳ ವಕೀಲರ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ, ಹಿರಿಯ ಸಿವಿಲ್ ನ್ಯಾಯಾದೀಶೆ ರೂಪಶ್ರೀ, ಪ್ರಧಾನ ಸಿವಿಲ್ ನ್ಯಾಯಾದೀಶೆ ಚೇತನ ಎಸ್.ಎಫ್ ಸರ್ಕಾರಿ ಅಭಿಯೋಜಕರಾದ ಜಯರಾಮ ಶೆಟ್ಟಿ,. ಹಿರಿಯ ವಕೀಲರಾದ ಎಂ.ಕೆ.ವಿಜಯ ಕುಮಾರ್.ಕೆ ಬಾಲಕೃಷ್ಣ ಶೆಟ್ಟಿ ಜತೆಯಾಗಿ ದೀಬೆಳಗುವುದರ ಮೂಲಕ ನ್ಯಾಯಾಲಯವನ್ನು ಉದ್ಘಾಟಿಸಿದರು.
ನೂತನ ನ್ಯಾಯಾಧೀಶರಾದ ದಿನೇಶ್ ಹೆಗ್ಡೆ ಮಾತನಾಡಿ ತ್ವರಿತ ನ್ಯಾಯದಾನಕ್ಕಾಗಿ ವಕೀಲರ ಸಹಕಾರ ಯಾಚಿಸಿದರು.
ಅಪೂರ್ವರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಗಿ ವಕೀಲರ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಪದ್ಮಪ್ರಸಾದ್ ಜೈನ್.ಎನ್ ನಿರೂಪಿಸಿದರು. ಜತೆ ಕಾರ್ಯದರ್ಶಿ ಸವಿತಾ ಹೆಗ್ಡೆ ವಂದಿಸಿದರು.