ಅಂತರಾಷ್ಟ್ರೀಯ ಸಿಇಒ ಮ್ಯಾಗಝೀನ್ ಏಷ್ಯಾ ವಿಭಾಗದ 2022ರ ಸಂಚಿಕೆಯಲ್ಲಿ ಕಾರ್ಕಳದ ಆನಂದ ಶೆಟ್ಟಿ
Update: 2022-03-01 23:00 IST
ಕಾರ್ಕಳ : ಅಂತರಾಷ್ಟ್ರೀಯ ಸಿಇಒ ಮ್ಯಾಗಝೀನ್ ಏಷ್ಯಾ ವಿಭಾಗವು ಮಾರ್ಚ್ 2022ರ ಸಂಚಿಕೆಯಲ್ಲಿ ಭುವನೇಂದ್ರ ಕಾಲೇಜಿನ ಹಿರಿಯ ವಿದ್ಯಾರ್ಥಿ, ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ಆನಂದ ಶೆಟ್ಟಿ ಅವರಿಗೆ ಸ್ಥಾನ ನೀಡಿ ಗೌರವಿಸಿದೆ.
ಇಂಡೋನೇಷ್ಯಾದ ನೊವೊ ನೊರ್ಡಿಸ್ಕ್ ಸಂಸ್ಥೆಯ ಮ್ಯಾನೇಜಿಂಗ್ ಡೈರಕ್ಟರ್ ಆಗಿರುವ ಆನಂದ ಶೆಟ್ಟಿ ತನ್ನ ಹುಟ್ಟೂರಿಗೆ ಹಲವಾರು ರೀತಿಯಲ್ಲಿ ಕೊಡುಗೆ ನೀಡಿರುತ್ತಾರೆ.
1,500 ಆಕ್ಸಿಮೀಟರ್ ಕೊಡುಗೆ
ಕಳೆದ ವರ್ಷ ಕೊರೋನ ಸಂದರ್ಭ ಕಾರ್ಕಳಕ್ಕೆ 21 ಲಕ್ಷ ರೂ. ವೆಚ್ಚದಲ್ಲಿ 1,500 ಆಕ್ಸಿಮೀಟರ್ ಅನ್ನು ಕೊಡುಗೆಯಾಗಿ ನೀಡಿದ್ದರು. ಕಠಿಣ ಪರಿಶ್ರಮ, ಶ್ರದ್ಧೆ, ನಾಯಕತ್ವ, ಸಾಮಾಜಿಕ ಕಳಕಳಿಯಿಂದಲೇ ಇದೀಗ ಆನಂದ ಶೆಟ್ಟಿ ಅವರು ಪ್ರತಿಷ್ಠಿತ ಸಿಇಒ ಮ್ಯಾಗಝೀನ್ ಏಷ್ಯಾ ವಿಭಾಗದ ಸಂಚಿಕೆಯಲ್ಲಿ ಗೌರವಿಸಲ್ಪಟ್ಟಿದ್ದಾರೆ.