×
Ad

ಮಂಗಳೂರು: ವೇಶ್ಯಾವಾಟಿಕೆ ಆರೋಪ; ಮೂವರ ಸೆರೆ

Update: 2022-03-02 20:40 IST

ಮಂಗಳೂರು, ಮಾ.2: ನಗರದ ಬೆಂದೂರ್‌ವೆಲ್ನ ಆಪಾರ್ಟ್‌ಮೆಂಟ್‌ವೊಂದರ ಫ್ಲ್ಯಾಟ್ ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಜಾಲವನ್ನು ಭೇದಿಸಿದ ಮಂಗಳೂರು ಸಿಸಿಬಿ ಪೊಲೀಸರು ಗ್ರಾಹಕರಿಗೆ ಯುವತಿಯರು/ಮಹಿಳೆಯರನ್ನು ಒದಗಿಸುತ್ತಿದ್ದ ಮೂವರನ್ನು ಬಂಧಿಸಿದ್ದಾರೆ. ಅಲ್ಲದೆ ನಾಲ್ವರು ನೊಂದ ಯುವತಿಯರನ್ನು ರಕ್ಷಿಸಿರುವುದಾಗಿ ತಿಳಿಸಿದ್ದಾರೆ.

ಬಂಧಿತರನ್ನು ಬಂಟ್ವಾಳ ತಾಲೂಕಿನ ವಿಟ್ಲಪಡ್ನೂರು ಗ್ರಾಮದ ಕೊಡಂಗಾಯಿಯ ಕೆ.ಪಿ. ಹಮೀದ್ (54), ನಗರದ ಆಕಾಶಭವನದ ನಾಗಬ್ರಹ್ಮ ಕಟ್ಟೆಯ ಬಳಿಯ ನಿವಾಸಿ ಅನುಪಮಾ ಶೆಟ್ಟಿ (46), ಮೂಲತಃ ಕಡದ ಕುಲ್ಕುಂದ ಕಾಲನಿಯ ಪ್ರಸ್ತುತ ಎಕ್ಕೂರಿನಲ್ಲಿ ವಾಸವಾಗಿರುವ ನಿಶ್ಮಿತಾ (23)ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 5 ಮೊಬೈಲ್ ಫೋನುಗಳು ಹಾಗೂ 50,000 ರೂ.ನಗದು, ಮಾರುತಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಖಚಿತ ಮಾಹಿತಿಯ ಮೇರೆಗೆ ಮಂಗಳೂರು ಸಿಸಿಬಿ ಇನ್‌ಸ್ಪೆಕ್ಟರ್‌ರ ನೇತೃತ್ವದ ತಂಡ ದಾಳಿ ನಡೆಸಿ ಮೂವರನ್ನು ಬಂಧಿಸಿ ಕದ್ರಿ ಠಾಣೆಗೆ ಹಸ್ತಾಂತರಿಸಿದರು.

ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್, ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಂ ಶಂಕರ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್, ಮಾರ್ಗದರ್ಶನದಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್, ಎಸ್ಸೈ ರಾಜೇಂದ್ರ ಬಿ, ಪ್ರದೀಪ ಟಿಆರ್ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೋಂಡಿದ್ದರು. ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News